ಲಂಡನ್:ವಿಶ್ವಕಪ್ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಯುವ ಬೌಲರ್ ಜೋಫ್ರಾ ಆರ್ಚರ್ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ಮೇಲೆ ಮಾರಕ ಬೌಲಿಂಗ್ ದಾಳಿ ಮಾಡಿ ತಾವೊಬ್ಬ ಉತ್ತಮ ಬೌಲರ್ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಆದರೆ ಅವರ ಅದ್ಭುತ ಪ್ರದರ್ಶನ ಹಿಂದೆ ನೋವಿನ ಕಥೆಯಿದೆ.
ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಮೇ 30ರಂದು ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ದಿನವೇ ಆರ್ಚರ್ ಸಹೋದರನನ್ನ ಮನೆಯ ಹೊರಗಡೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅದು ಯುವ ಬೌಲರ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೂ ಮೊದಲ ಪಂದ್ಯದಲ್ಲೇ ಆರ್ಚರ್ 3ವಿಕೆಟ್ ಪಡೆದುಕೊಂಡು ಮಿಂಚಿದ್ದರು.
ಚಿಕ್ಕವರಾಗಿದ್ದಾಗಿನಿಂದಲೂ ಒಟ್ಟಿಗೆ ಬೆಳೆದ ಸಹೋದರನ ಸಾವಿನ ಸುದ್ದಿ ಆರ್ಚರ್ಗೆ ಮತ್ತಷ್ಟು ನೋವನ್ನುಂಟು ಮಾಡಿತ್ತು. ಈ ವೇಳೆ ಮನೆಗೆ ವಾಪಸ್ ಹೋಗಲು ಅವರು ಮುಂದಾಗಿದ್ದರಂತೆ. ಆದರೆ, ತಂಡದ ಮ್ಯಾನೇಜ್ಮೆಂಟ್ ಅವರನ್ನ ಸಮಾಧಾನಪಡಿಸಿ ವಿಶ್ವಕಪ್ನಲ್ಲಿ ಭಾಗಿಯಾಗುವಂತೆ ಮಾಡಿತ್ತು. ಇನ್ನು ಫೈನಲ್ ಪಂದ್ಯದಲ್ಲೂ ಆರ್ಚರ್ ಬೌಲಿಂಗ್ನಲ್ಲಿ ಮಿಂಚು ಹರಿಸಿ ತಂಡ ಕಪ್ ಗೆಲ್ಲುವಂತೆ ಮಾಡಿದ್ದರು.
ತಾವು ಎಸೆದ ಸೂಪರ್ ಓವರ್ನಲ್ಲಿ ಎದುರಾಳಿ ತಂಡಕ್ಕೆ ಕೇವಲ 15ರನ್ ಬಿಟ್ಟುಕೊಟ್ಟು ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದರು. ಜತೆಗೆ ವಿಶ್ವಕಪ್ ಟೂರ್ನಿಯಲ್ಲಿ 20ವಿಕೆಟ್ ಕಬಳಿಸಿರುವ ಶ್ರೇಯ ಕೂಡ ಅವರಿಗೆ ಸಲ್ಲುತ್ತದೆ. ಜತೆಗೆ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯೂ ಆರ್ಚರ್ಗೆ ಒಲಿದು ಬಂದಿದೆ.