ಜೈಪುರ್:ಅಂಡರ್ 19 ವಿಶ್ವಕಪ್ ಕ್ರಿಕೆಟ್ನಲ್ಲಿ ಸ್ಪಿನ್ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರವಿ ಬಿಷ್ಣೋಯ್ ಕಿಂಗ್ಸ್ ಇಲೆವೆನ್ ತಂಡದ ರಾಹುಲ್, ಗೇಲ್ ಹಾಗೂ ಮ್ಯಾಕ್ಸ್ವೆಲ್ ರಂತಹ ಬ್ಯಾಟ್ಸ್ಮನ್ಗಳಿಗೆ ನೆಟ್ ನಲ್ಲಿ ಬೌಲಿಂಗ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತ ಅಂಡರ್ 19 ವಿಶ್ವಕಪ್ನಲ್ಲಿ ಗೆಲ್ಲದಿದ್ದರೂ ಕೆಲವು ಯುವ ಆಟಗಾರರು ಬೆಳಕಿಗೆ ಬಂದರು. ಅಂತಹವರಲ್ಲಿ ಜೈಪುರದ ರವಿ ಬಿಷ್ಣೋಯ್ ಕೂಡ ಒಬ್ಬರು. ಇವರು ವಿಶ್ವಕಪ್ನಲ್ಲಿ 17 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಇದೀಗ ಲಾಕ್ಡೌನ್ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ್ದು, ತಾವೂ ಐಪಿಎಲ್ಗಾಗಿ ಮನೆಯಲ್ಲಿಯೇ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದ್ದು, ಆದಷ್ಟು ಬೇಗ ಕೊರೊನಾ ಸಾಂಕ್ರಾಮಿಕ ರೋಗದ ಸಮಸ್ಯೆ ಬಗೆಹರಿದು ಐಪಿಎಲ್ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.