ಬೆಂಗಳೂರು:ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಯಾವಾಗಲೂ ಶಾಂತಚಿತ್ತದಿಂದಲೇ ಇರುವುದು ಸರ್ವೆ ಸಾಮಾನ್ಯ. ಆದರೆ ಇದೀಗ ಆ್ಯಡ್ವೊಂದರ ವಿಡಿಯೋದಲ್ಲಿ ಉಗ್ರ ಅವತಾರ ತಾಳಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ವಿಡಿಯೋ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅವರ ಇನ್ನೊಂದು ಮುಖ ನೋಡಿ ಆಶ್ಚರ್ಯಕ್ಕೊಳಗಾಗಿದ್ದಾರೆ. ರಾಹುಲ್ ಬಾಯ್ ಈ ಅವತಾರ ಯಾವಾಗ್ಲೂ ನೋಡಿಲ್ಲ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಏನಿದು ವಿಡಿಯೋ :ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾನ್ಸರ್ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿರುವ ರಾಹುಲ್ ದ್ರಾವಿಡ್ ಬೆಂಗಳೂರು ಟ್ರಾಫಿಕ್ನ ನೈಜ ಸ್ವರೂಪ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಅವರು ಉಗ್ರ ರೂಪ ತಾಳಿದ್ದು, ಬೆಂಗಳೂರು ಟ್ರಾಫಿಕ್ನಿಂದ ಆಕ್ರೋಶಗೊಂಡಿರುವ ದಿ ವಾಲ್ ಕೈಯಲ್ಲಿ ಬ್ಯಾಟ್ ಹಿಡಿದು ಮುಂದುಗಡೆ ಬಂದಿರುವ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಜತೆಗೆ ಓವರ್ ಟೇಕ್ ಮಾಡಲು ಬಂದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಶೇಷವೆಂದರೆ ಕ್ರೆಡಿಟ್ ಕಾರ್ಡ್ಗಳ ಬಿಲ್ ತುಂಬಲು ಸುಲಭವಾಗುವಂತೆ ಮಾಡಿರುವ ಕ್ರೆಡ್ ಆ್ಯಪ್ ಜಾಹೀರಾತು ಇದಾಗಿದ್ದು, ಹೊಸ ವಿಚಾರದೊಂದಿಗೆ ಈ ರೀತಿಯಾಗಿ ವಿಡಿಯೋ ಶೂಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.