ಕರ್ನಾಟಕ

karnataka

ETV Bharat / sports

ಕೆರಿಬಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಜೆರ್ಸಿ ಧರಿಸಿ ವಿವಾದ: ದಿನೇಶ್ ಕಾರ್ತಿಕ್ ಬೇಷರತ್ ಕ್ಷಮೆ - ಕೆರಿಬಿಯನ್ ಪ್ರೀಮಿಯರ್ ಲೀಗ್

ಕೋಲ್ಕತ್ತಾ ನೈಟ್ ರೈಡರ್ಸ್​(ಕೆಕೆಆರ್) ತಂಡದ ನಾಯಕನಾಗಿರುವುದರಿಂದ ನನ್ನನ್ನು ಮೆಕ್ಕಲಂ ಆಹ್ವಾನಿಸಿದ್ದರು ಎಂದು ಒಟ್ಟಾರೆ ಬೆಳವಣಿಗೆಗೆ ದಿನೇಶ್ ಕಾರ್ತಿಕ್ ಸ್ಪಷ್ಟೀಕರಣ ನೀಡಿದ್ದಾರೆ.

ದಿನೇಶ್ ಕಾರ್ತಿಕ್

By

Published : Sep 8, 2019, 1:09 PM IST

ಮುಂಬೈ:ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿಂಬಾಗೋ ನೈಟ್​ ರೈಡರ್ಸ್(ಟಿಕೆಆರ್​)​ ಜೆರ್ಸಿ ಧರಿಸಿ ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿರುವ ಶೋಕಾಸ್ ನೋಟಿಸ್​ಗೆ ಟೀಂ ಇಂಡಿಯಾ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.

ಟ್ರಿಂಬಾಗೋ ನೈಟ್ ರೈಡರ್ಸ್​ ತಂಡದ ಪರವಾಗಿ ನಾನು ಯಾವುದೇ ರೀತಿಯಲ್ಲೂ ಫ್ರಾಂಚೈಸಿಯಲ್ಲಿ ಭಾಗಿಯಾಗಿಲ್ಲ. ಸೆಪ್ಟೆಂಬರ್ 4ರಂದು ಟಿಕೆಆರ್ ತಂಡದ ಮೊದಲ ಪಂದ್ಯದಲ್ಲಿ ಆ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಆಹ್ವಾನದ ಮೇರೆಗೆ ಆಗಮಿಸಿ ಪಂದ್ಯ ವೀಕ್ಷಿಸಿದ್ದೆ. ಪಂದ್ಯ ವೀಕ್ಷಣೆ ಸಂದರ್ಭದಲ್ಲಿ ನಾನು ಟಿಕೆಆರ್ ತಂಡದ ಜೆರ್ಸಿ ಧರಿಸಿದ್ದು ನಿಜ ಮತ್ತು ಬಿಸಿಸಿಐನಿಂದ ಅನುಮತಿ ಪಡೆಯದೆ ಇದ್ದುದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಕಾರ್ತಿಕ್ ಹೇಳಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್​(ಕೆಕೆಆರ್) ತಂಡದ ನಾಯಕನಾಗಿರುವುದರಿಂದ ನನ್ನನ್ನು ಮೆಕ್ಕಲಂ ಆಹ್ವಾನಿಸಿದ್ದರು ಎಂದು ಒಟ್ಟಾರೆ ಬೆಳವಣಿಗೆಗೆ ದಿನೇಶ್ ಕಾರ್ತಿಕ್ ಸ್ಪಷ್ಟೀಕರಣ ನೀಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್​ನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಕಮ್​ ದಿನೇಶ್​ ಕಾರ್ತಿಕ್​​ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಶೋಕಾಸ್​ ನೋಟಿಸ್​ ಜಾರಿ ಮಾಡಿತ್ತು.

ABOUT THE AUTHOR

...view details