ಬರ್ಮಿಂಗ್ಹ್ಯಾಮ್: 2004ರಲ್ಲೇ ಇಂಡಿಯಾ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದ ದಿನೇಶ್ ಕಾರ್ತಿಕ್ 2007ರ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರೂ ಆಡುವ 11ರಲ್ಲಿ ಚಾನ್ಸ್ ಪಡೆದುಕೊಂಡಿರಲಿಲ್ಲ. ಹೀಗಾಗಿ ಅವರ ವಿಶ್ವಕಪ್ ಆಡುವ ಕನಸು ಕನಸಾಗಿ ಉಳಿದುಕೊಂಡಿತ್ತು. ಇನ್ನು ಈ ವೇಳೆ, ತಂಡ ನಾಕೌಟ್ ಹಂತದಲ್ಲೇ ವಿಶ್ವಕಪ್ನಿಂದ ಹೊರಬಿದ್ದಿತ್ತು. ಅದಾದ ಬಳಿಕ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ನಲ್ಲಿ ಅವಕಾಶ ಪಡೆದುಕೊಂಡಿದ್ದ ಡಿಕೆ, ಇಂದಿನ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದಾರೆ.
ಏಕದಿನ ತಂಡಕ್ಕೆ ಆಯ್ಕೆಯಾದ 15 ವರ್ಷಗಳ ಬಳಿಕ ವಿಶ್ವಕಪ್ನಲ್ಲಿ ಚಾನ್ಸ್... ಕೊನೆಗೂ ಕನಸು ಈಡೇರಿಸಿಕೊಂಡ ಡಿಕೆ! - ಬರ್ಮಿಂಗ್ಹ್ಯಾಮ್
ಟೀಂ ಇಂಡಿಯಾ ಪರ ಅನೇಕ ಪಂದ್ಯ ಗೆಲ್ಲಿಸಿಕೊಟ್ಟಿರುವ ಶ್ರೇಯ ದಿನೇಶ್ ಕಾರ್ತಿಕ್ ಅವರಿಗೆ ಸಲ್ಲುತ್ತದೆ. ಈ ಮಧ್ಯೆ ಕಳೆದ 15 ವರ್ಷಗಳಿಂದ ವಿಶ್ವಕಪ್ನಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದ ಕಾರ್ತಿಕ್, ಈ ಸಲದ ವಿಶ್ವಕಪ್ನಲ್ಲಿ ಅವಕಾಶ ಪಡೆದುಕೊಳ್ಳುವುದರ ಜತೆಗೆ ಆಡುವ 11ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
34 ವರ್ಷದ ದಿನೇಶ್ ಕಾರ್ತಿಕ್ 2011 ಹಾಗೂ 2015ರ ವಿಶ್ವಕಪ್ನಲ್ಲಿ ಅವಕಾಶ ಪಡೆಕೊಳ್ಳುವಲ್ಲಿ ವಿಫಲಗೊಂಡಿದ್ದರು. ಇದೀಗ ಚಾನ್ಸ್ ಪಡೆದುಕೊಂಡಿರುವ ಕಾರ್ತಿಕ್ ತಂಡದಲ್ಲಿ ಕೇದಾರ್ ಜಾಧವ್ ಬದಲಿಗೆ ಅವಕಾಶ ಪಡೆದುಕೊಂಡಿದ್ದಾರೆ. ಈ ಸಲದ ವಿಶ್ವಕಪ್ನಲ್ಲಿ ಅವಕಾಶ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ, ಈ ಹಿಂದಿನ ಕೆಲ ಪಂದ್ಯಗಳಲ್ಲಿ ಕೇದಾರ್ ಜಾಧವ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕಾರಣ, ಇವತ್ತು ಚಾನ್ಸ್ ಪಡೆದುಕೊಂಡಿದ್ದಾರೆ.
92 ಏಕದಿನ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, 1,138 ರನ್ಗಳಿಕೆ ಮಾಡಿದ್ದು, 79 ಅವರ ಗರಿಷ್ಠ ಸ್ಕೋರ್ ಆಗಿದೆ. ನಿಡಾಹಸ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡಕ್ಕೆ ಗೆಲುವು ತಂದುಕೊಟ್ಟಿರುವ ಶ್ರೇಯ ಕೂಡ ದಿನೇಶ್ ಕಾರ್ತಿಕ್ಗೆ ಸಲ್ಲುತ್ತದೆ. ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್, ರಿಷಭ್ ಪಂತ್ ಹಾಗೂ ಎಂಎಸ್ ಧೋನಿ ಮೂರು ಜನ ವಿಕೆಟ್ ಕೀಪರ್ಗಳು ಮೈದಾನಕ್ಕಿಳಿದಿರುವುದು ವಿಶೇಷವಾಗಿದೆ.