ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತಮ್ಮ ಅಂಜುಬರುಕತನದ ಹೀನಾಯ ಸೋಲು ಕೆಕೆಆರ್ ತಂಡದ ಮನೋಸ್ಥೈರ್ಯದ ಮೇಲೆ ಖಂಡಿತ ಪರಿಣಾಮ ಬೀರಲಿದೆ ಎಂದು ಒಪ್ಪಿಕೊಂಡಿರುವ ಕೋಚ್ ಬ್ರೆಂಡನ್ ಮೆಕಲಮ್, ಅದೃಷ್ಟ ಇನ್ನು ನಮ್ಮ ಕೈಯಲ್ಲಿದೆ, ಮುಂದಿನ ಪಂದ್ಯಗಳಲ್ಲಿ ಪುಟಿದೇಳಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಂಟು ತಂಡಗಳು ಸ್ಪರ್ಧೆಯಲ್ಲಿ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದರೂ ಕೆಕೆಆರ್ ತಂಡ ಫೈನಲ್ ಪ್ರವೇಶಿಸಬಹುದು ಎಂದು ಮೆಕಲಮ್ ನಂಬಿದ್ದಾರೆ.
" ಈ ಸೋಲು ಆತ್ಮವಿಶ್ವಾಸ ದೃಷ್ಟಿಯಿಂದ ಆಟಗಾರರ ಮೇಲೆ ಪರಿಣಾಮ ಬೀರಲಿದೆ. ಆದರೆ, ಇದನ್ನು ದಾಟಿ ಹೇಗೆ ಸುಧಾರಣೆ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ನಾವು ಈ ಸಮಯದಲ್ಲಿ ಆತ್ಮಸ್ಥೈರ್ಯ ಕುಸಿಯದಂತೆ ಶ್ರಮಿಸಬೇಕಿದೆ" ಎಂದು ಪಂದ್ಯದ ನಂತರ ಮೆಕಲಮ್ ತಿಳಿಸಿದ್ದಾರೆ.
"ಆದರೆ ಟೂರ್ನಮೆಂಟ್ನಲ್ಲಿ ಫೈನಲ್ ತಲುಪಬಲ್ಲ ತಂಡವನ್ನು ನಾವು ಹೊಂದಿದ್ದೇವೆ ಎಂಬುದನ್ನು ನಾನು ಪರಿಪೂರ್ಣವಾಗಿ ನಂಬಿದ್ದೇನೆ. ನಾವು ಸ್ವಲ್ಪ ಸುಧಾರಿಸಬೇಕಿದೆ. ನಮ್ಮ ಅದೃಷ್ಟ ಟೂರ್ನಿಯಲ್ಲಿ ನಾವಿನ್ನೂ ನಾಲ್ಕನೇ ಸ್ಥಾನದಲ್ಲಿದ್ದೇವೆ. ಈ ಪಂದ್ಯದ ಸೋಲಿನಲ್ಲಿ ಕಂಡಿರುವ ಕೊರತೆಗಳನ್ನು ತುಂಬಿಕೊಳ್ಳಬೇಕಿದೆ. ಮತ್ತು ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಿದೆ. ಖಂಡಿತ ನಾವು ಮುಂದಿನ ಪಂದ್ಯಗಳಲ್ಲಿ ಪುಟಿದೇಳಲಿದ್ದೇವೆ" ಎಂದಿದ್ದಾರೆ ಅವರು.
ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಬ್ಯಾಟ್ಸ್ಮನ್ಗಳ ಕೆಟ್ಟ ಪ್ರದರ್ಶನ ತೋರಿದ್ದನ್ನು, ಹಾಗೂ ಆರ್ಸಿಬಿ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದನ್ನು ಮೆಕಲಮ್ ಒಪ್ಪಿಕೊಂಡಿದ್ದಾರೆ.
ಬ್ಯಾಟಿಂಗ್ ತೆಗೆದುಕೊಂಡ ಕೆಕೆಆರ್ ಸಿರಾಜ್(8ಕ್ಕೆ3) ಬೌಲಿಂಗ್ ದಾಳಿಗೆ ಸಿಲುಕಿ 10 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ಗಳಿಸಿತ್ತು. ಸಣ್ಣ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಇನ್ನು 6 ಓವರ್ಗಳಿರುವಂತೆ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ 2ನೇ ಸ್ಥಾನಕ್ಕೇರಿತು.