ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್​ ಎಲ್ಲಾ ತಂಡಗಳಿಗೂ ಸವಾಲಿದೆ: ಕಗಿಸೋ ರಬಾಡಾ

12 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದ್ದ ಡೆಲ್ಲಿ ತಂಡದ 2019ರಲ್ಲಿ 7ವರ್ಷಗಳ ನಂತರ ಪ್ಲೇಆಫ್ ತಲುಪಿತ್ತು. ಆದರೆ 2016ರ ಚಾಂಪಿಯನ್ ಸನ್​ರೈಸರ್ಸ್​ ​ ವಿರುದ್ಧ ಗೆದ್ದರೂ 2ನೇ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ ಸೋತು ಹೊರಬಿದ್ದಿತ್ತು.

ಡೆಲ್ಲಿ ಕ್ಯಾಪಿಟಲ್
ಡೆಲ್ಲಿ ಕ್ಯಾಪಿಟಲ್

By

Published : Sep 8, 2020, 10:52 PM IST

ದುಬೈ: 13ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡ ಎಲ್ಲಾ ತಂಡಗಳಿಗೆ ಸವಾಲಾಗಲಿದೆ ಎಂದು ವೇಗದ ಬೌಲರ್​ ಕಗಿಸೊ ರಬಾಡಾ ಅಭಿಪ್ರಾಯ ಪಟ್ಟಿದ್ದಾರೆ.

12 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದ್ದ ಡೆಲ್ಲಿ ತಂಡದ 2019ರಲ್ಲಿ 7ವರ್ಷಗಳ ನಂತರ ಪ್ಲೇಆಫ್ ತಲುಪಿತ್ತು. ಆದರೆ 2016ರ ಚಾಂಪಿಯನ್ ಸನ್​ರೈಸರ್ಸ್​ ​ ವಿರುದ್ಧ ಗೆದ್ದರೂ 2ನೇ ಕ್ವಾಲಲಿಫೈಯರ್ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ ಸೋತು ಹೊರಬಿದ್ದಿತ್ತು.

" ನಾವು ನಿಜವಾಗಿಯೂ ಕಳೆದ ಬಾರಿ ಒಳ್ಳೆಯ ಆವೃತ್ತಿಯನ್ನು ಹೊಂದಿದ್ದೆವು. ಹಾಗಾಗಿ ನಾವು ಈಗ ಯಾವ ತಂಡಕ್ಕಾದರೂ ಸವಾಲಾಗಬಹುದು ಮತ್ತು ಸ್ಪರ್ಧೆಯಲ್ಲಿ ಜಯಗಳಿಸಬಹುದು. ಏಕೆಂದರೆ ನಾವು ಇದೇ ತಂಡದಲ್ಲೇ ಕಳೆದ ಬಾರಿ ಪ್ರಶಸ್ತಿ ಸನಿಹ ಬಂದಿದ್ದೆವು. ಹಾಗಾಗಿ ಮಾನಸಿಕವಾಗಿ ಅದು ನಮಗೆ ನೆರವಾಗಲಿದೆ" ಎಂದು ರಬಾಡಾ ಹೇಳಿಕೆ ನೀಡಿದ್ದಾರೆ.

ಆದರೆ, ಇದು ಹೊಸ ಟೂರ್ನಮೆಂಟ್​ ಆದ್ದರಿಂದ ನಾವು ಮತ್ತೆ ಪ್ರಾರಂಭಿಸಬೇಕಾಗಿದೆ ಮತ್ತು ಉತ್ತಮ ತಂಡವನ್ನು ಹೊಂದಿರುವ ನಾವು ಒಗ್ಗಟ್ಟಿನಿಂದ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ. ಬಹುಪಾಲು ಅದೇ ತಂಡವನ್ನು ಮುಂದುವರಿಸಿರುವುದನ್ನು ಒಳ್ಳೆಯದು ಎಂದಿರುವ ಅವರು ಅನುಭವಿ ಆಟಗಾರರು ಹೊಸದಾಗಿ ಸೇರ್ಪಡೆಗೊಂಡಿರುವುದನ್ನುಸ್ವಾಗತಿಸಿದ್ದಾರೆ.

ಕೇವಲ 18 ಐಪಿಎಲ್​ ಪಂದ್ಯಗಳನ್ನಾಡಿರುವ ರಬಾಡಾ 31 ವಿಕೆಟ್​ ಪಡೆದಿದ್ದಾರೆ. ಸದ್ಯ ಕ್ವಾರಂಟೈನ್​ ಮುಗಿಸಿದ ನಂತರ ಸೋಮವಾರ ಅವರು ಡೆಲ್ಲಿ ಕ್ಯಾಪಿಟಲ್​ ತಂಡದ ಜೊತೆ ಮೊದಲ ಬಾರಿ ತರಬೇತಿಗೆ ಹಾಜರಾಗಲಿದ್ದಾರೆ.

ಸುದೀರ್ಘ ಸಮಯದ ನಂತರ ಕ್ರಿಕೆಟ್​ಗೆ ಮರಳುತ್ತಿರುವುದರಿಂದ ತಾವೂ ಮತ್ತೆ ಚಾರ್ಜ್​ ಆಗಲು ಐಪಿಎಲ್​ ಉತ್ತಮ ವೇದಿಕೆ ಎಂದು ದಕ್ಷಿಣ ಆಫ್ರಿಕಾದ ಮಂಚೂಣಿ ಬೌಲರ್​ ಹೇಳಿದ್ದಾರೆ.

ABOUT THE AUTHOR

...view details