ಕರ್ನಾಟಕ

karnataka

ETV Bharat / sports

ತಮ್ಮನ್ನು ಸೇರಿದಂತೆ ಐಪಿಎಲ್​ ಬೆಸ್ಟ್​ ಇಲೆವೆನ್​ ಆಯ್ಕೆ ಮಾಡಿದ ಡೇವಿಡ್​ ವಾರ್ನರ್​..

ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್​ ಸ್ಟಾರ್ಕ್​, ಮುಂಬೈ ಇಂಡಿಯನ್ಸ್​ ತಂಡದ ಜಸ್ಪ್ರೀತ್​ ಬುಮ್ರಾರನ್ನು 8 ಮತ್ತು 9ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. 10ನೇ ಕ್ರಮಾಂಕದಲ್ಲಿ ಅನುಭವಿ ಆಶಿಷ್​ ನೆಹ್ರಾರನ್ನು ಹಾಗೂ 11ನೇ ಸ್ಥಾನಕ್ಕೆ ಕುಲ್ದೀಪ್​ ಅಥವಾ ಯಜುವೇಂದ್ರ ಚಾಹಲ್‌ರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​

By

Published : May 7, 2020, 11:44 AM IST

ನವದೆಹಲಿ :ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ತಮ್ಮ ನೆಚ್ಚಿನ ಐಪಿಎಲ್​ ತಂಡವನ್ನು ಆಯ್ಕೆ ಮಾಡಿದ್ದಾರೆ. ಮಾಲಿಂಗ, ಪೊಲಾರ್ಡ್​, ಶೇನ್​ ವಾಟ್ಸನ್​ ಹಾಗೂ ಯುವರಾಜ್ ಸಿಂಗ್​ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ.

ಕಾಮೆಂಟೇಟರ್​ ಹರ್ಷಬೋಗ್ಲೆಯವರೊಂದಿಗೆ ನಡೆದ ಸಂದರ್ಶನದಲ್ಲಿ ತಮಗೆ ನೆಚ್ಚಿನ ತಂಡವನ್ನು ಘೋಷಿಸಿದ್ದಾರೆ. ತಂಡದ ಆರಂಭಿಕರಾಗಿ ತಮ್ಮ ಜೊತೆಗೆ ರೋಹಿತ್​ರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ, 4ನೇ ಕ್ರಮಾಂದಲ್ಲಿ ಸಿಎಸ್​ಕೆ ತಂಡದ ಸುರೇಶ್ ರೈನಾ, ನಂಬರ್‌5 ಮತ್ತು 6ನೇ ಸ್ಥಾನಕ್ಕೆ ಮ್ಯಾಕ್ಸ್​ವೆಲ್​ ಹಾಗೂ ಹಾರ್ದಿಕ್​ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. 7ನೇ ಕ್ರಮಾಂಕ ಹಾಗೂ ವಿಕೆಟ್​ ಕೀಪರ್​ ಜಾಗಕ್ಕೆ ಸಿಎಸ್​ಕೆ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯನ್ನು ವಾರ್ನರ್​ ಸೆಲೆಕ್ಟ್​ ಮಾಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್​ ಸ್ಟಾರ್ಕ್​, ಮುಂಬೈ ಇಂಡಿಯನ್ಸ್​ ತಂಡದ ಜಸ್ಪ್ರೀತ್​ ಬುಮ್ರಾರನ್ನು 8 ಮತ್ತು 9ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. 10ನೇ ಕ್ರಮಾಂಕದಲ್ಲಿ ಅನುಭವಿ ಆಶಿಷ್​ ನೆಹ್ರಾರನ್ನು ಹಾಗೂ 11ನೇ ಸ್ಥಾನಕ್ಕೆ ಕುಲ್ದೀಪ್​ ಅಥವಾ ಯಜುವೇಂದ್ರ ಚಾಹಲ್‌ರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ಸನ್​ರೈಸರ್ಸ್​ ತಂಡದ ನಾಯಕರಾಗಿರುವ ವಾರ್ನರ್​ 126 ಪಂದ್ಯಗಳಲ್ಲಿ 4,706 ರನ್​ಗಳಿಸಿದ್ದಾರೆ. 44 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. ಇವರ ನೇತೃತ್ವದಲ್ಲಿ ಸನ್​ರೈಸರ್ಸ್​ ತಂಡ 2016ರಲ್ಲಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿತ್ತು.

ABOUT THE AUTHOR

...view details