ಢಾಕಾ:ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿರುವ ಕಿವೀಸ್ನ ಲೆಜೆಂಡ್ ಸ್ಪಿನ್ನರ್ ಡೇನಿಯಲ್ ವೆಟೋರಿ ಬಿಸಿಬಿಯಿಂದ ಪ್ರತಿದಿನ 2.5 ಲಕ್ಷ ವೇತನ ಪಡೆಯಲಿದ್ದು, ಇವರು ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಎನಿಸಿಕೊಂಡಿದ್ದಾರೆ.
2020ರ ಟಿ20 ವಿಶ್ವಕಪ್ವರೆಗೆ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಳೆದ ತಿಂಗಳು ವೆಟೋರಿಯವರನ್ನು ಬಿಸಿಬಿ ಆಯ್ಕೆ ಮಾಡಿಕೊಂಡಿತ್ತು. ಅವರಿಗೆ ದಿನದ ಲೆಕ್ಕಾಚಾರದಲ್ಲಿ 3571 ಅಮೆರಿಕನ್ ಡಾಲರ್ ವೇತನ ನಿಗದಿಮಾಡಲಾಗಿದೆ. ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ದಿನಕ್ಕೆ 2.5 ಲಕ್ಷ ರೂ. ಪಡೆದುಕೊಳ್ಳಲಿದ್ದಾರೆ. ಆದರೆ ವೆಟೋರಿ ಶೇ. 30 ರಷ್ಟನ್ನು ತೆರಿಗೆ ರೂಪದಲ್ಲಿ ಕಟ್ಟಲಿದ್ದಾರೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ವೆಬ್ಸೈಟ್ cricfrenzy ವರದಿ ಮಾಡಿದೆ.