ಕರ್ನಾಟಕ

karnataka

ETV Bharat / sports

IPL​ ಮೆಗಾಫೈಟ್​ನಲ್ಲಿ ನಾಳೆ ಆರ್​ಸಿಬಿ - ಸಿಎಸ್​ಕೆ ಸೆಣಸು​: ಎರಡು ತಂಡದ ಆಡುವ 11ರ ಬಳಗ ಈ ರೀತಿ!?

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮಹಾ ಟೂರ್ನಿಗೆ ನಾಳೆ ಚಾಲನೆ ಸಿಗಲಿದ್ದು, ಆರಂಭಿಕ ಪಂದ್ಯದಲ್ಲಿ ಆರ್​ಸಿಬಿ - ಸಿಎಸ್​ಕೆ ತಂಡಗಳು ಸೆಣಸಾಟ ನಡೆಸಲಿವೆ.

ಧೋನಿ-ಕೊಹ್ಲಿ

By

Published : Mar 22, 2019, 4:32 PM IST

ಚೆನ್ನೈ: ನಾಳೆಯಿಂದ 12ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೇಂಜರ್ಸ್​ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸೆಣಸಾಟ ನಡೆಸಲಿವೆ.

ಸಿಎಸ್​ಕೆ-ಆರ್​ಸಿಬಿ ಫೈಟ್​​

ಟಿಂ ಇಂಡಿಯಾದ ಕ್ಯಾಪ್ಟನ್​ ಕೊಹ್ಲಿ ಹಾಗೂ ಮಾಜಿ ಕ್ಯಾಪ್ಟನ್​ ಧೋನಿ ಉಭಯ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದು, ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಶುಭಾರಂಭ ಮಾಡಬೇಕು ಎನ್ನುವ ತವಕ ಇಬ್ಬರಲ್ಲೂ ಇದೆ.

ಮೊದಲ ಆವೃತ್ತಿಯಿಂದಲೂ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದರೂ, ಇಲ್ಲಿಯವರೆಗೆ ಕಪ್​ ಮಾತ್ರ ಗೆಲ್ಲಲ್ಲು ಸಾಧ್ಯವಾಗಿಲ್ಲ. ಆದರೆ ಇತ್ತ ಸಿಎಸ್​ಕೆ ಈಗಾಗಲೇ ಮೂರು ಸಲ ಕಪ್​ ಗೆದ್ದಿದೆ. ಆದರೆ ಈ ಸಲವಾದರೂ ಅದ್ಭುತ ಪ್ರದರ್ಶನ ನೀಡಿ ಕಪ್​ ಒಲಿಸಿಕೊಳ್ಳಬೇಕು ಎಂಬ ಆಸೆ ಆರ್​ಸಿಬಿ ತಂಡಕ್ಕಿದೆ.

ಐಪಿಎಲ್​​ನಲ್ಲಿ ಮುಖಾಮುಖಿ

  • ಒಟ್ಟು 23 ಪಂದ್ಯದಲ್ಲಿ ಫೈಟ್​
  • ಸಿಎಸ್​ಕೆ 15 ಪಂದ್ಯಗಳಲ್ಲಿ ಗೆಲುವು
  • ಆರ್​ಸಿಬಿ 7 ಪಂದ್ಯಗಳಲ್ಲಿ ವಿನ್​
  • 1ಪಂದ್ಯದಿಂದ ಫಲಿತಾಂಶವಿಲ್ಲ

ಆಡುವ ಸಂಭವನೀಯ 11ರ ಬಳಗ
ಆರ್​ಸಿಬಿ: ಮೊಯಿನ್​ ಅಲಿ, ಪಾರ್ಥಿವ್​ ಪಟೇಲ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಎಬಿ ಡಿವಿಲಿಯರ್ಸ್​​, ಶಿಮ್ರಾನ್​ ಹೇಟ್ಮೇರ್​, ಶಿವಂ ದುಬೆ, ವಾಷಿಂಗ್ಟನ್​ ಸುಂದರ್​, ಥಿಮ್​ ಸೌಥಿ/ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಉಮೇಶ್​ ಯಾದವ್​, ಯಜುವೇಂದ್ರ ಚಹಾಲ್​, ಮೊಹಮ್ಮದ್​ ಸಿರಾಜ್​​

ಸಿಎಸ್​​ಕೆ: ಅಂಬಾಟಿ ರಾಯುಡು, ಶೇನ್​ ವ್ಯಾಟ್ಸನ್​, ಸುರೇಶ್​ ರೈನಾ,ಎಂಎಸ್​ ಧೋನಿ (ಕ್ಯಾಪ್ಟನ್​), ಬಿಲ್ಲಿಂಗ್ಸ್​​, ಕೇದಾರ್​ ಜಾಧವ್​​,ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್​, ಮೋಹಿತ್​ ಶರ್ಮಾ, ಇಮ್ರಾನ್​ ತಾಹೀರ್​

ಸ್ಥಳ: ಎಂಎಂ ಚಿದಬರಂ ಕ್ರೀಡಾಂಗಣ ಚೆನ್ನೈ
ಪ್ರಸಾರ: ಸಂಜೆ 8ಗಂಟೆ

ABOUT THE AUTHOR

...view details