ನವದೆಹಲಿ :ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನ ಮುಂದಿನ ಆವೃತ್ತಿಗೆ ಟ್ರಿನ್ ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡ ನನ್ನನ್ನು ಆಯ್ಕೆ ಮಾಡಿದೆ ಎಂದು ರಾಜಸ್ಥಾನ್ ರಾಯಲ್ಸ್‌ನ ಮಾಜಿ ಸ್ಪಿನ್ನರ್ ಪ್ರವೀಣ್ ತಾಂಬೆ ಹೇಳಿಕೊಂಡಿದ್ದರು. ಆದರೆ, ತಾಂಬೆ ಹೇಳಿಕೆಯನ್ನು ಸಿಪಿಎಲ್ ಸಂಘಟಕರು ಮಾತ್ರವಲ್ಲದೇ ಫ್ರ್ಯಾಂಚೈಸಿ ಕೂಡ ಅಲ್ಲಗಳೆದಿದೆ.
ಟಿಕೆಆರ್ಗೆ ಪ್ರವೀಣ್ ತಾಂಬೆ ಆಯ್ಕೆ ಅಲ್ಲಗಳೆದ ಸಿಪಿಎಲ್ ಅಧಿಕಾರಿಗಳು
ಆಟಗಾರರ ಆಯ್ಕೆ ಬಗ್ಗೆ ಸಿಪಿಎಲ್ ಅಥವಾ ಫ್ರ್ಯಾಂಚೈಸಿ ಎಲ್ಲೂ ಕೂಡ ಘೋಷಣೆ ಮಾಡದಿದ್ದರೂ, ಟಿಕೆಆರ್ ನನ್ನನ್ನು ಆಯ್ಕೆ ಮಾಡಿದೆ ಎಂದು ವೆಬ್ಸೈಟ್ಗೆ ನೀಡಿದ ಸಂದರ್ಶನವೊಂದರಲ್ಲಿ ರಾಜಸ್ಥಾನ್ ರಾಯಲ್ಸ್‌ನ ಮಾಜಿ ಸ್ಪಿನ್ನರ್ ಪ್ರವೀಣ್ ತಾಂಬೆ ಹೇಳಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎಲ್ ಹಿರಿಯ ಅಧಿಕಾರಿ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಇದುವರೆಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಸಿಪಿಎಲ್ ಇನ್ನೂ ಯಾವುದೇ ಆಟಗಾರರ ಬಗ್ಗೆ ಘೋಷಣೆ ಮಾಡಿಲ್ಲ ಎಂದಿದ್ದಾರೆ. ಇನ್ನು ನೇರ ಮಾತುಕತೆ ನಡೆದಿದೆಯೇ ಎಂದು ಕೇಳಿದಕ್ಕೆ, ಈ ಕುರಿತು ಫ್ರ್ಯಾಂಚೈಸಿ ಜೊತೆ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಈ ಕುರಿತು ತಿಳಿದುಕೊಂಡು ಮತ್ತೆ ಪ್ರತಿಕ್ರಿಯಿಸುವುದಾಗಿ ಟಿಕೆಆರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಟಗಾರರ ಆಯ್ಕೆ ಬಗ್ಗೆ ಸಿಪಿಎಲ್ ಅಥವಾ ಫ್ರ್ಯಾಂಚೈಸಿ ಎಲ್ಲೂ ಕೂಡ ಘೋಷಣೆ ಮಾಡದಿದ್ದರೂ, ಟಿಕೆಆರ್ ನನ್ನನ್ನು ಆಯ್ಕೆ ಮಾಡಿದೆ ಎಂದು ವೆಬ್ಸೈಟ್ಗೆ ನೀಡಿದ ಸಂದರ್ಶನವೊಂದರಲ್ಲಿ ತಾಂಬೆ ಹೇಳಿದ್ದಾರೆ