ನವದೆಹಲಿ:2016ರ ಇಂಡಿಯನ್ ಪ್ರೀಮಿಯರ್ ಲೀಗ್ನ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸ್ಟಾರ್ ಆಟಗಾರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಬಳಸಿದ್ದ ಕ್ರಿಕೆಟ್ ಕಿಟ್ಗಳನ್ನು ಹರಾಜಿಗಿಡಲು ತೀರ್ಮಾನಿಸಿದ್ದಾರೆ.
ಈ ಬಗ್ಗ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್, 'ನಾವು ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಇಂತಹ ಸಮಯದಲ್ಲಿ ವಿರಾಟ್ ಮತ್ತು ನಾನು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಬಯಸುತ್ತೇವೆ' ಎಂದಿದ್ದಾರೆ.
2016ರ ಐಪಿಎಲ್ ವೇಳೆ ನಾನು ಮತ್ತು ವಿರಾಟ್, ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ, 229 ರನ್ಗಳ ಜೊತೆಯಾಟ ಆಡಿದ್ದೆವು. ಅಂದಿನ ಪಂದ್ಯದಲ್ಲಿ ಆರ್ಸಿಬಿ ಅಭೂತಪೂರ್ವ ಜಯ ದಾಖಲಿಸಿತ್ತು. ಇದೀಗ ಆಪಂದ್ಯದಲ್ಲಿ ವಿರಾಟ್ ಬಳಸಿದ್ದ ಬ್ಯಾಟ್ ಮತ್ತು ಕೈಗವಸುಗಳು, ನನ್ನ ಶರ್ಟ್ ಮತ್ತು ಬ್ಯಾಟ್ ಹರಾಜು ಹಾಕುತ್ತಿದ್ದೇವೆ. ಬಿಡ್ ಆರ್ ಬೈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹರಾಜು ಹಾಕುತ್ತೇವೆ ಎಂದಿದ್ದಾರೆ.
ಬಿಕ್ಕಟಿನ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೀಡದ ಜನರ ನೆರವಿಗೆ ನಿಂತ ಚಾರಿಟಿಗೆ ಹಣ ನೀಡುತ್ತೇವೆ. ಒಟ್ಟು ಮೊತ್ತದಲ್ಲಿ ಧಕ್ಷಿಣ ಆಫ್ರಿಕಾದ ಚಾರಿಟಿಗೆ ಒಂದು ಭಾಗ ಮತ್ತು ಭಾರತದ ಚಾರಿಟಿಗೆ ಒಂದು ಭಾಗ ಸಮನಾಗಿ ನೀಡಲಾಗುತ್ತದೆ ಎಂದಿದ್ದಾರೆ.
2020ರ ಮೇ 10ರಂದು ಹರಾಜು ಮುಗಿದ ತಕ್ಷಣ, ನಾನು ವೈಯಕ್ತಿಕವಾಗಿ ವಿಜೇತರನ್ನು ಸಂಪರ್ಕಿಸುತ್ತೇನೆ ಮತ್ತು ಪ್ಯಾಕೇಜ್ ಅನ್ನು ನಿಮ್ಮ ಮನೆಗೆ ತಲುಪಿಸಲು ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ.