ಪೋರ್ಟ್ ಆಫ್ ಸ್ಪೇನ್: ವಿಶ್ವ ಕ್ರಿಕೆಟ್ನ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಭಾರತ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದೇನೆ ಎಂದಿದ್ದರು.
ಆದರೆ, ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಏಕದಿನ ಸರಣಿಗೆ ಆಯ್ಕೆಯಾಗಿದ್ದರಿಂದ ಕೊನೆಯ ಏಕದಿನ ಪಂದ್ಯ ಅವರ ವೃತ್ತಿ ಬದುಕಿನ ಕೊನೆಯ ಪಂದ್ಯವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಪಂದ್ಯದ ನಂತರ ಮಾತನಾಡಿರುವ ಗೇಲ್ ನಾನು ನನ್ನ ನಿವೃತ್ತಿ ಘೋಷಿಸಿಲ್ಲ, ನಾನು ಈಗಲೂ ವೆಸ್ಟ್ ಇಂಡೀಸ್ ಕ್ರಿಕೆಟ್ನಲ್ಲಿದ್ದೇನೆ. ವಿಂಡೀಸ್ ಮಂಡಳಿಯಿಂದ ಬರುವ ನೋಟಿಸ್ಗಾಗಿ ಕಾಯುತ್ತಿರುವೆ ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ವಿಂಡೀಸ್ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಇದನ್ನು ನೋಡಿದರೆ ಕ್ರಿಸ್ ಗೇಲ್ ನಿವೃತ್ತಿ ಸದ್ಯಕ್ಕಿಲ್ಲ ಎಂಬುದು ಬಹಿರಂಗವಾಗಿ ತಿಳಿದುಬಂದಿದೆ.
ಕ್ರಿಸ್ ಗೇಲ್ ವಿಶ್ವಕಪ್ ನಂತರ ನಿವೃತ್ತಿ ಘೋಷಿಸಲಿದ್ದೇನೆ ಎಂದಿದ್ದರು. ನಂತರ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡು ನಂತರ ನಿವೃತ್ತಿ ಘೋಷಿಸಿಲಿದ್ದೇನೆ ಎಂದಿದ್ದ ಗೇಲ್ ಇದೀಗ ನಾನು ಯಾವುದೇ ನಿವೃತ್ತಿ ಘೋಷಿಸಿಲ್ಲ ಎನ್ನುವ ಮೂಲಕ ಇನ್ನಷ್ಟು ದಿನ ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ಖಷಿತಪಡಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಗೇಲ್ 41 ಎಸೆತಗಳಲ್ಲಿ 5 ಸಿಕ್ಸರ್ 8 ಬೌಂಡರಿ ಸಹಿತ 72 ರನ್ಗಳಿಸಿದ್ದರು. ಜೊತೆಗೆ ಲೆವಿಸ್ ಜೊತೆಗೆ ಮೊದಲ ವಿಕೆಟ್ಗೆ115 ರನ್ಗಳ ಜೊತೆಯಾಟ ನೀಡಿದ್ದರು.