ಕರ್ನಾಟಕ

karnataka

ETV Bharat / sports

ವಿಶ್ವದಾಖಲೆಯ ಗ್ರ್ಯಾಂಡ್​ಸ್ಲಾಮ್​ ಎತ್ತಿ ಹಿಡಿಯಲು ಸೆರೆನಾ ಉತ್ಸುಕ - ಸೆರೆನಾ ವಿಲಿಯಮ್ಸ್​ ಯುಎಸ್​ ಓಪನ್​

ಅತಿಹೆಚ್ಚು ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿ ಗೆದ್ದಿರುವ ಸೆರೆನಾ ಮಾರ್ಗರೇಟ್​ ಕೋರ್ಟ್​(24)ನ ದಾಖಲೆ ಮುರಿಯಲು ಕೇವಲ ಒಂದೆ ಹೆಜ್ಜೆ ಹಿಂದಿದ್ದಾರೆ. ಸೆರೆನಾ 23 ಬಾರಿ ಗ್ರ್ಯಾಂಡ್​​ಸ್ಲಾಮ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Serena Williams says she'll play US Open
ಸೆರೆನಾ ವಿಲಿಯಮ್ಸ್​

By

Published : Jun 18, 2020, 9:24 AM IST

ನ್ಯೂಯಾರ್ಕ್​: ಕೊರೊನಾ ಭೀತಿಯ ನಡುವೆಯೂ ಆಯೋಜನೆಗೊಳ್ಳುತ್ತಿರುವ 2020ರ ಯುಎಸ್​ ಓಪನ್​ ಗ್ರ್ಯಾಂಡ್​ಸ್ಲಾಮ್​ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ 23 ಬಾರಿ ಗ್ರ್ಯಾಂಡ್ಸ್​ಸ್ಲಾಮ್​ ವಿಜೇತೆ ಸೆರೆನಾ ವಿಲಿಯಮ್ಸ್​ ಹೇಳಿದ್ದಾರೆ.

ಬುಧವಾರ ಯುಎಸ್ ಟೆನಿಸ್ ಅಸೋಸಿಯೇಷನ್‌ ಪ್ರಸ್ತುತಪಡಿಸಿದ ವಿಡಿಯೋದಲ್ಲಿ, ಆರು ಬಾರಿಯ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ತಾವೂ ಈ ಪ್ರಮುಖ ಚಾಂಪಿಯನ್‌ಶಿಪ್‌ಗಾಗಿ ನ್ಯೂಯಾರ್ಕ್​​​​ಗೆ‌ ಮರಳಲು ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಅತಿಹೆಚ್ಚು ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿ ಗೆದ್ದಿರುವ ಮಾರ್ಗರೇಟ್​ ಕೋರ್ಟ್​(24)ನ ದಾಖಲೆ ಮುರಿಯಲು ಸೆರೆನಾಗೆ ಕೇವಲ ಒಂದೇ ಒಂದು ಹೆಜ್ಜೆ ಮಾತ್ರ ಹಿಂದಿದ್ದಾರೆ. ಸೆರೆನಾ 23 ಬಾರಿ ಗ್ರ್ಯಾಂಡ್​​ಸ್ಲಾಮ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಯುಎಸ್​ ಓಪನ್​ ಆಗಸ್ಟ್​ 31 ರಿಂದ ಸೆಪ್ಟೆಂಬರ್​ 13ರವರೆಗೆ ಪ್ರೇಕ್ಷಕರಿಲ್ಲದೇ ನಡೆಯಲಿದೆ ಎಂದು ನ್ಯೂಯಾರ್ಕ್​ ಗವರ್ನರ್​ ಆ್ಯಂಡ್ರ್ಯೂ ಕ್ಯುಮೊ ಮಂಗಳವಾರ ಪ್ರಕಟಿಸಿದ್ದರು. ಯುನೈಟೆಡ್ ಸ್ಟೇಟ್ಸ್ ಟೆನಿಸ್ ಅಸೋಸಿಯೇಷನ್ ​​ಆಟಗಾರರನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕ್ಯುಮೊ ಹೇಳಿದ್ದಾರೆ.

ABOUT THE AUTHOR

...view details