ಕರ್ನಾಟಕ

karnataka

ETV Bharat / sports

ಬುಮ್ರಾ ಐಪಿಎಲ್​ನಲ್ಲಿ ಮಿಂಚಿದರೂ ಟೀಮ್​ ಇಂಡಿಯಾಗೆ ಈ ವಿಚಾರದಲ್ಲಿ ಟೆನ್ಷನ್​ ಹಾಗೆ ಇದೆ! - ಮುಂಬೈ ಇಂಡಿಯನ್ಸ್​

ಕಳೆದ ವರ್ಷ ಬಲಗೈ ವೇಗಿ ಬುಮ್ರಾ ಬೆನ್ನಿನ ನೋವಿಗೆ ತುತ್ತಾಗಿದ್ದರು. ಅವರ 2019ರ ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಅವರು ಮತ್ತೆ ಈ ವರ್ಷ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ದರು. ಈ ಸೀಮಿತ ಓವರ್​ಗಳ ಸರಣಿಯಲ್ಲಿ ಅವರ ಪ್ರದರ್ಶನ ವ್ಯತಿರಿಕ್ತವಾಗಿ ಕಂಡುಬಂದಿದೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ

By

Published : Nov 11, 2020, 11:08 PM IST

ನವದೆಹಲಿ: ಈ ವರ್ಷದ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾರ ಪ್ರದರ್ಶನ ತೃಪ್ತಿದಾಯಕವಾಗಿದೆಯಾದರೂ ಅವರ ನಿಜವಾದ ಪರೀಕ್ಷೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎದುರಾಗಲಿದೆ.

ಬುಮ್ರಾ 13ನೇ ಆವೃತ್ತಿಯಲ್ಲಿ 27 ವಿಕೆಟ್ ಪಡೆದು ಗರಿಷ್ಠ ವಿಕೆಟ್​ ಪಡೆದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅವರೂ ಕೋವಿಡ್ ಲಾಕ್​ಡೌನ್​ಗಿಂತ ಮುಂಚಿತವಾಗಿ ನಡೆದಿದ್ದ ಅಂತಾರಾಷ್ಟ್ರೀಯ ಟಿ20 ಟೂರ್ನಿಯಲ್ಲೂ ವಿಕೆಟ್​ ಪಡೆದಿದ್ದರು. ಆದರೆ ಅವರ ಏಕದಿನ ಪಂದ್ಯಗಳಲ್ಲಿನ ಪ್ರದರ್ಶನ ಮಾತ್ರ ಭಾರತ ತಂಡದಕ್ಕೆ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಏಕೆಂದರೆ ಗಾಯದಿಂದ ಹೊರಬಂದ ನಂತರ ಅವರು ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಪಡೆಯುವ ಬೌಲರ್​ ಆಗಿ ಕಾಣಿಸಿಕೊಳ್ಳುತ್ತಿಲ್ಲ.

ಕಳೆದ ವರ್ಷ ಬಲಗೈ ವೇಗಿ ಬುಮ್ರಾ ಬೆನ್ನಿನ ನೋವಿಗೆ ತುತ್ತಾಗಿದ್ದರು. ಅವರ 2019ರ ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಅವರು ಮತ್ತೆ ಈ ವರ್ಷ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ದರು. ಈ ಸೀಮಿತ ಓವರ್​ಗಳ ಸರಣಿಯಲ್ಲಿ ಅವರ ಪ್ರದರ್ಶನ ವ್ಯತಿರಿಕ್ತವಾಗಿ ಕಂಡುಬಂದಿದೆ.

ಅವರು ಕಮ್​ಬ್ಯಾಕ್ ಮಾಡಿದ ನಂತರ 8 ಟಿ20 ಪಂದ್ಯಗಳಲ್ಲಿ 6.38 ಎಕಾನಮಿಯಲ್ಲಿ 8 ವಿಕೆಟ್ ಪಡೆದಿದ್ದಾರೆ. ಇದು ಅವರ ವೃತ್ತಿ ಜೀವನದ ಅತ್ಯುತ್ತಮ ಎಕಾನಮಿಯಾಗಿದೆ. ಆದರೆ ಏಕದಿನ ಕ್ರಿಕೆಟ್​ಗೆ ಹೋಲಿಸಿದರೆ ಬುಮ್ರಾ ಫಾರ್ಮ್​ ಸಮಸ್ಯೆಯಾಗಿ ಕಂಡುಬಂದಿದೆ. ಅವರು ಈ ವರ್ಷ ಆಡಿರುವ 6 ಏಕದಿನ ಪಂದ್ಯಗಳಲ್ಲಿ 5.1 ಎಕಾನಮಿಯಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ ಕೂಡ ಸರಾಸರಿ ಎಕಾನಮಿಗಿಂತಲೂ ಹೆಚ್ಚಾಗಿದೆ.

ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್ ಗೌತಮ್​ ಗಂಭೀರ್​ ಪ್ರಕಾರ, ಬುಮ್ರಾ ಬೌಲಿಂಗ್​ನಲ್ಲಿ ಬ್ಯಾಟ್ಸ್​ಮನ್​ ರಕ್ಷಣಾತ್ಮವಾಗಿ ಆಡಿದರೂ ಅವರನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅದು ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಸಾಧ್ಯವಾಗುತ್ತದೆ. ಆದರೆ ಏಕದಿನ ಪಂದ್ಯಗಳಲ್ಲಿ ಅವರ ಇತ್ತೀಚಿನ ದಾಖಲೆ ಪರಿಗಣಿಸಿದರೆ ಅವರು ವಿಕೆಟ್​ ಪಡೆಯಲು ಕಷ್ಟಪಡುತ್ತಿದ್ದಾರೆ ಎಂದಿದ್ದಾರೆ.

ಆದರೆ 1983 ವಿಶ್ವಕಪ್ ವಿಜೇತ ತಂಡದ ಬೌಲರ್​ ಮದನ್​ ಲಾಲ್​ ಬುಮ್ರಾ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬೌಲಿಂಗ್​ಗೆ ಐಪಿಎಲ್​ನಲ್ಲಿ ಯಾರೊಬ್ಬರು ಸುಲಭವಾಗಿ ಆಡಲು ಸಾಧ್ಯವಾಗಿಲ್ಲ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಬುಮ್ರಾ ವಿಕೆಟ್​ ಪಡೆಯಲು ವಿಫಲರಾಗುತ್ತಿರುವ ಕಾರಣ ಅವರ ಬೌಲಿಂಗ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಇತರೆ 40 ಓವರ್​ಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಆದರೆ ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳು ಉತ್ತಮ ಬೌಲರ್​ಗಳನ್ನು ಬಿಡಬಹುದು, ಆದರೆ ಟಿ20 ಕ್ರಿಕೆಟ್​ನಲ್ಲಿ ಹಾಗಾಗುವುದಿಲ್ಲ ಹಾಗಾಗಿ ಬುಮ್ರಾ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಆದೆ ಐಪಿಎಲ್​ನಲ್ಲಿ ಉತ್ತಮ ಫಾರ್ಮನಲ್ಲಿರುವ ಬುಮ್ರಾ ಆಸ್ಟ್ರೇಲಿಯಾ ನೆಲದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.

ABOUT THE AUTHOR

...view details