ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ ಗೆಲ್ಲಬೇಕಾದ್ರೆ ಅವರಿಬ್ಬರನ್ನು ತಂಡಕ್ಕೆ ವಾಪಸ್​ ಕರೆತನ್ನಿ: ಕೊಹ್ಲಿಗೆ ಗಂಗೂಲಿ ಸೂಚನೆ! - ಟಿ-20 ವಿಶ್ವಕಪ್​​​

ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ ಗೆಲ್ಲಬೇಕಾದರೆ ಈ ಇಬ್ಬರು ಪ್ಲೇಯರ್ಸ್​ಗಳನ್ನ ತಂಡಕ್ಕೆ ವಾಪಸ್​ ಕರೆತನ್ನಿ ಎಂದು ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಸೂಚನೆ ನೀಡಿದ್ದಾರೆ.

ಗಂಗೂಲಿ,ವಿರಾಟ್​​ ಕೊಹ್ಲಿ

By

Published : Sep 28, 2019, 7:34 PM IST

ಕೋಲ್ಕತ್ತಾ:ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಿಂದ ಸ್ಟಾರ್​​ ಸ್ಪಿನ್ನರ್​ಗಳಾದ ಕುಲ್ದೀಪ್​ ಯಾದವ್​ ಹಾಗೂ ಯಜುವೇಂದ್ರ ಚಹಲ್​ಗೆ ಕೈಬಿಟ್ಟು, ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಗಂಗೂಲಿ ಮಾತನಾಡಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಐಸಿಸಿ ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಪ್ಲೇಯರ್​ಗಳನ್ನ ತಂಡಕ್ಕೆ ವಾಪಸ್​ ಕರೆದು ತನ್ನಿ ಎಂದು ಕ್ಯಾಪ್ಟನ್​ ಕೊಹ್ಲಿಗೆ ಮನವಿ ಮಾಡಿದ್ದಾರೆ. ಸದ್ಯ ಮೈದಾನಕ್ಕಿಳಿಯುತ್ತಿರುವ ಟಿ-20 ತಂಡ ಉತ್ತಮವಾಗಿದೆ. ಆದರೆ ಟಿ-20 ಟೂರ್ನಿಯಲ್ಲಿ ಮಣಿಕಟ್ಟಿನ ಸ್ಪಿನ್ನರ್​ಗಳು ತಂಡಕ್ಕೆ ಅವಶ್ಯವಾಗಿರುವ ಕಾರಣ, ಚಹಲ್​,ಕುಲ್ದೀಪ್​ ತಂಡಕ್ಕೆ ವಾಪಸ್​ ಬರಲಿ ಎಂದು ಸೂಚನೆ ನೀಡಿದ್ದಾರೆ.

ಕುಲ್ದೀಪ್​,ಯಜುಚೇಂದ್ರ ಚಹಲ್​

ಟಿ-20 ಟೂರ್ನಿ ವೇಳೆ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ ಹಾಗೂ ಕೃನಾಲ್​ ಪಾಂಡ್ಯ ಅವಶ್ಯಕತೆ ಇಲ್ಲ. ಸದ್ಯದಲ್ಲೇ ಟೆಸ್ಟ್​ ಸರಣಿ ಆರಂಭಗೊಳ್ಳಲಿರುವ ಕಾರಣ, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಸದ್ಯ ಟಿ-20ಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಮೇಲಿಂದ ಮೇಲೆ ಕೆಲವೊಂದು ಬದಲಾವಣೆ ಮಾಡುವುದರಿಂದಲೂ ತಂಡ ಮತ್ತಷ್ಟು ಬಲಿಷ್ಠವಾಗುತ್ತಿದೆ. ಆದರೆ ಈ ಇಬ್ಬರು ಪ್ಲೇಯರ್ಸ್​ ತಂಡದಲ್ಲಿರುಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ರಿಷಭ್​ ಪಂತ್​ ಸೂಕ್ತ ಪ್ಲೇಯರ್​ ಆಗಿದ್ದು, ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details