ಮೆಲ್ಬೋರ್ನ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ವರುಣ ಅಡ್ಡಿಯಾಗಿದ್ದು, ಕುಸಿಯುತ್ತಿದ್ದ ಭಾರತಕ್ಕೆ ನಾಯಕ ಅಜಿಂಕ್ಯಾ ರಹಾನೆ ಆಸರೆಯಾಗಿದ್ದಾರೆ.
ದಿನದ ಆರಂಭದಲ್ಲಿ ಚುರುಕಿನ ಬೌಲಿಂಗ್ ನಡೆಸಿದ ಕಮ್ಮಿನ್ಸ್ ಗಿಲ್ (45) ಮತ್ತು ಪುಜಾರಾ (17) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ನಂತರ ಬಂದ ವಿಹಾರಿ ಕೂಡ 21 ರನ್ ಗಳಿಸಿ ಲಿಯಾನ್ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ 40 ಎಸೆತಗಳಲ್ಲಿ 29 ರನ್ ಗಳಿಸಿ ಸ್ಟಾರ್ಕ್ ಎಸೆತದಲ್ಲಿ ಪೇನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟ್ ಬೀಸುತ್ತಿರುವ ನಾಯಕ ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್ನಲ್ಲಿ 23ನೇ ಅರ್ಧಶತಕ ಸಿಡಿಸಿದ್ರು.
ಮಳೆ ಕಾರಣದಿಂದ ಚಹಾ ವಿರಾಮ ಘೋಷಣೆ ಮಾಡಿದ್ದು, ಭಾರತ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದು, ಅಜಿಂಕ್ಯ ರಹಾನೆ (53) ಮತ್ತು ರವೀಂದ್ರ ಜಡೇಜಾ (4) ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ವಿರುದ್ಧ ಸಾಲಿಡ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಬೌಲರ್ಗಳು ಮೊದಲ ಇನ್ನಿಂಗ್ಸ್ನಲ್ಲಿ 195 ರನ್ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ್ರು.