ಕರ್ನಾಟಕ

karnataka

ETV Bharat / sports

ಕೆಪಿಎಲ್​: ಶಿವಮೊಗ್ಗ ಲಯನ್ಸ್​ ವಿರುದ್ಧ ಬಿಜಾಪುರ ಬುಲ್ಸ್​ಗೆ ಜಯ - ಕೆಪಿಎಲ್

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​​​ ಪಂದ್ಯಾವಳಿಯಲ್ಲಿ ಬಿಜಾಪುರ ಬುಲ್ಸ್ ತಂಡವು ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು.

ಬಿಜಾಪುರ ಬುಲ್ಸ್ ಗೆಲವು

By

Published : Aug 28, 2019, 2:02 AM IST

ಮೈಸೂರು:ರಾಜು ಭಟ್ಕಳ್ (66) ಹಾಗೂ ಎಂ.ಜಿ.ನವೀನ್ ಅವರ ಸಮಯೋಜಿತ ಆಟದ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ 17 ರನ್​ಗಳಿಂದಗೆಲುವು ಸಾಧಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಬಿಜಾಪುರ ಬುಲ್ಸ್ ತಂಡವು 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್​​​​​ ಕಲೆ ಹಾಕಿತು. ಇನ್ನು ತಂಡದ ಪರ ರಾಜು ಭಟ್ಕಳ್(66), ರಿಷಬ್ ಸಿಂಗ್(3), ಎಂ.ಜಿ.ನವೀನ್(68), ಜಸ್ವಂತ್ ಆಚಾರ್ಯ(9), ಸುನಿಲ್ ರಾಜು(36), ಎನ್.ಪಿ.ಭರೇತ್(3) ರನ್ ಬಾರಿಸಿದರು.

ಬಳಿಕ ಈ ಮೊತ್ತವನ್ನು ಬೆನ್ನತ್ತಿದ್ದ ಶಿವಮೊಗ್ಗ ಲಯನ್ಸ್ ತಂಡ 20 ಓವರ್​​ನಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅರ್ಜುನ ಹೊಯ್ಸಳ(69), ಎಂ.ನಂದೀಶ್ (45 ನಾಟೌಟ್) ಆಟ ವ್ಯರ್ಥವಾಯಿತು.

For All Latest Updates

ABOUT THE AUTHOR

...view details