ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​​ನಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ: ಲಕ್ಷ್ಮಣ್ - ಭುವನೇಶ್ವರ್ ಕುಮಾರ್ ನ್ಯೂಸ್​

ಹಿರಿಯ ವೇಗಿ ತೊಡೆ ಸ್ನಾಯು ಸೆಳೆತಕ್ಕೆ ಒಳಗಾಗಿ ಯುಎಇನಲ್ಲಿ ನಡೆದಿದ್ದ ಐಪಿಎಲ್​ನಿಂದ ಹೊರಬಿದ್ದಿದ್ದರು. ಜೊತೆಗೆ ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿಯನ್ನು ತಪ್ಪಿಸಿಕೊಂಡಿದ್ದರು.

ಟಿ20 ವಿಶ್ವಕಪ್​ 2021
ವಿವಿಎಸ್​ ಲಕ್ಷ್ಮಣ್​

By

Published : Mar 10, 2021, 3:41 PM IST

ನವದೆಹಲಿ: ಸ್ವಿಂಗ್ ಕಿಂಗ್​ ಎಂದೇ ಖ್ಯಾತರಾಗಿರುವ ಭುವನೇಶ್ವರ್ ಕುಮಾರ್ ಮುಂಬರುವ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯ ವೇಗಿ ತೊಡೆ ಸ್ನಾಯು ಸೆಳೆತಕ್ಕೆ ಒಳಗಾಗಿ ಯುಎಇನಲ್ಲಿ ನಡೆದಿದ್ದ ಐಪಿಎಲ್​ನಿಂದ ಹೊರಬಿದ್ದಿದ್ದರು. ಜೊತೆಗೆ ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿಯನ್ನು ತಪ್ಪಿಸಿಕೊಂಡಿದ್ದರು.

ಭುವನೇಶ್ವರ್ ಕುಮಾರ್​ ಫಿಟ್​ನೆಸ್ ಮರಳಿ ಪಡೆದಿರುವುದಕ್ಕೆ ನನಗೆ ತಂಬಾ ಸಂತೋಷವಾಗಿದೆ. ಏಕೆಂದರೆ ಅವರು ಭಾರತ ತಂಡದ ಪ್ರಮುಖ ಬೌಲರ್, ವಿಶೇಷವಾಗಿ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಅವರ ಪಾತ್ರ ಮಹತ್ವವಾದದ್ದು ಎಂದು ​ಲಕ್ಷ್ಮಣ್​ ತಿಳಿಸಿದ್ದಾರೆ.

ಭುವನೇಶ್ವರ್ ಕುಮಾರ್​

ಇದನ್ನು ಓದಿ:ಭಾರತ ಟಿ20 ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ: ಬಟ್ಲರ್​

ಜಸ್ಪ್ರೀತ್ ಬುಮ್ರಾರನ್ನು ಹೊರತುಪಡಿಸಿದರೆ, ಭಾರತ ತಂಡದ ಬೌಲಿಂಗ್ ಲೈನ್​ಅಪ್​ನಲ್ಲಿ ಯಾರಾದರೂ ಅನುಭವಿ ಬೌಲರ್​ ಇರಬೇಕು, ಅದು ಕೇವಲ ಹೊಸ ಚೆಂಡಿನಲ್ಲಿ ಮಾತ್ರವಲ್ಲದೆ, ಡೆತ್ ಓವರ್​ ನಿರ್ವಹಿಸಬಲ್ಲವರಾಗಿರಬೇಕು. ಅದಕ್ಕೆ ಭುವನೇಶ್ವರ್​ ಸೂಕ್ತ, ಅವರು ನವೆಂಬರ್​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭುವಿ ಶೇಕಡಾ 100 ರಷ್ಟು ಫಿಟ್ ಆಗಿರಬೇಕಾದರೆ, ಕೆಲಸದ ಹೊರೆ ಮತ್ತು ಅವರ ಗಾಯವನ್ನು ನಿರ್ವಹಿಸಲು ಸಾಕಷ್ಟು ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಇಂಗ್ಲೆಂಡ್​ ವಿರುದ್ಧದ 5 ಟಿ20 ಪಂದ್ಯಗಳಲ್ಲಿ ಕೆಲವು ಪಂದ್ಯಗಳು ವಿಶ್ರಾಂತಿ ಪಡೆಯಬೇಕೆಂದು ಲಕ್ಷ್ಮಣ್​ ಸಲಹೆ ನೀಡಿದ್ದಾರೆ.

ಇದನ್ನು ಓದಿ:ಯುವಕರಿಗೆ ಸೂರ್ಯಕುಮಾರ್ ಯಾದವ್ ರೋಲ್ ಮಾಡೆಲ್: ವಿವಿಎಸ್ ಲಕ್ಷ್ಮಣ್​

ABOUT THE AUTHOR

...view details