ಕರ್ನಾಟಕ

karnataka

ETV Bharat / sports

ಮೊದಲಾರ್ಧದ ಐಪಿಎಲ್​ಗೆ ಬೆನ್​ ಸ್ಟೋಕ್ಸ್​ ಗೈರಾಗುವ ಸಾಧ್ಯತೆ - ಐಪಿಎಲ್​ನ ಮೊದಲಾರ್ಧಕ್ಕೆ ಬೆನ್​ ಸ್ಟೋಕ್ಸ್​ ಅಲಭ್ಯ

ರಾಜಸ್ಥಾನ್​ ರಾಯಲ್ಸ್​ ಬೆನ್​ ಸ್ಟೋಕ್ಸ್​ ಜೊತೆ ಚರ್ಚಿಸಿ ನಂತರ ಮುಂದಿನ ಹಂತಕ್ಕೆ ತೆರಳಲಿದೆ. ಇಂಗ್ಲಿಷ್​ ಆಲ್​ರೌಂಡರ್​ ತಮ್ಮ ಲಭ್ಯತೆಯ ಬಗ್ಗೆ ಖಚಿತಪಡಿಸಿದ ನಂತರವಷ್ಟೇ ಈ ವಿಚಾರದ ಬಗ್ಗೆ ಫ್ರಾಂಚೈಸಿ ಮುಂದುವರಿಯಲಿದೆ. ಅದಾಗ್ಯೂ, ರಾಜಸ್ಥಾನ್​ ತಂಡ ಯುಎಇನಲ್ಲಿ ಸ್ಟೋಕ್ಸ್​ರನ್ನು ಕಾಣಲು ಇಷ್ಟಪಡುತ್ತದೆ..

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

By

Published : Sep 7, 2020, 7:48 PM IST

ದುಬೈ :ರಾಜಸ್ಥಾನ್ ರಾಯಲ್ಸ್​ ತಂಡ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಅವರ ಸೇವೆಯನ್ನು ಮೊದಲಾರ್ಧದ ಐಪಿಎಲ್​ನಲ್ಲಿ ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ. 13ನೇ ಆವೃತ್ತಿಯ ಐಪಿಎಲ್​ ಸೆಪ್ಟೆಂಬರ್​ 19ರಿಂದ ಆರಂಭವಾಗಲಿದೆ. ರಾಜಸ್ಥಾನ್​ ರಾಯಲ್ಸ್​ ಸೆಪ್ಟೆಂಬರ್​ 22ರಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದೆ.

ಪ್ರಸ್ತುತ ಇಂಗ್ಲೆಂಡ್​ ತಂಡದಿಂದ ಬ್ರೇಕ್​ ತೆಗೆದುಕೊಂಡಿರುವ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಸದ್ಯ ನ್ಯೂಜಿಲ್ಯಾಂಡ್​ನಲ್ಲಿದ್ದು, ಬ್ರೈನ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ತಮ್ಮ ತಂದೆಯ ಜತೆ ಕೆಲ ಸಮಯ ಕಳೆಯಲು ಬಯಸಿರುವುದರಿಂದ ಐಪಿಎಲ್‌ನ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ನ್ಯೂಜಿಲ್ಯಾಂಡ್​ ಕೋವಿಡ್​-19​ ನಿಯಮಗಳ ಪ್ರಕಾರ ಬೆನ್​ ಸ್ಟೋಕ್ಸ್​ ಈಗಷ್ಟೇ 14 ದಿನಗಳ ಕ್ವಾರಂಟೈನ್​ ಮುಗಿಸಿದ್ದಾರೆ. ಪ್ರಸ್ತುತ ಅವರ ತಂದೆಯನ್ನು ಭೇಟಿ ಮಾಡಿದ್ದಾರೆ. ಖಂಡಿತವಾಗಿಯೂ ಕೆಲ ಅಮೂಲ್ಯ ಸಮಯವನ್ನು ಅವರ ತಂದೆಯೊಂದಿಗೆ ಕಳೆಯಬೇಕಾಗಿದೆ ಎಂದು ಆರ್​ಆರ್​ ಪ್ರಾಂಚೈಸಿ ಮೂಲ ಪಿಟಿಐಗೆ ತಿಳಿಸಿದೆ.

ಈಗಷ್ಟೇ ಕ್ವಾರಂಟೈನ್​ ಮುಗಿಸಿರುವುದರಿಂದ ಅವರು ಐಪಿಎಲ್​ನ ಟೂರ್ನಿಯ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು ವಾಸ್ತವ. ಅದು ಅರ್ಥ ಮಾಡಿಕೊಳ್ಳಬಹುದಾದ ವಿಷಯ. ಇಂತಹ ಸಂದರ್ಭದಲ್ಲಿ ಪ್ರಾಂಚೈಸಿ ಅವರಿಗೆ ಕರೆ ಮಾಡಲು ಬಯಸುವುದಿಲ್ಲ. ಅವರು ಅಮೂಲ್ಯ ಸಮಯವನ್ನು ಅವರ ಕುಟುಂಬದ ಜೊತೆ ಕಳೆಯಲು ಬಿಡಬೇಕಾಗಿದೆ. ಯಾವುದೇ ಚರ್ಚೆಯನ್ನು ನಂತರ ಮಾಡಬಹುದು ಎಂದು ಆ ಸುದ್ದಿ ಮೂಲ ತಿಳಿಸಿದೆ.

ರಾಜಸ್ಥಾನ್​ ರಾಯಲ್ಸ್​ ಬೆನ್​ ಸ್ಟೋಕ್ಸ್​ ಜೊತೆ ಚರ್ಚಿಸಿ ನಂತರ ಮುಂದಿನ ಹಂತಕ್ಕೆ ತೆರಳಲಿದೆ. ಇಂಗ್ಲಿಷ್​ ಆಲ್​ರೌಂಡರ್​ ತಮ್ಮ ಲಭ್ಯತೆಯ ಬಗ್ಗೆ ಖಚಿತಪಡಿಸಿದ ನಂತರವಷ್ಟೇ ಈ ವಿಚಾರದ ಬಗ್ಗೆ ಫ್ರಾಂಚೈಸಿ ಮುಂದುವರಿಯಲಿದೆ. ಅದಾಗ್ಯೂ, ರಾಜಸ್ಥಾನ್​ ತಂಡ ಯುಎಇನಲ್ಲಿ ಸ್ಟೋಕ್ಸ್​ರನ್ನು ಕಾಣಲು ಇಷ್ಟಪಡುತ್ತದೆ ಎಂದಿದ್ದಾರೆ.

ನಿಷೇಧದಿಂದ ರಾಜಸ್ಥಾನ್​ ಐಪಿಎಲ್​ಗೆ ಮರಳಿದಾಗಿನಿಂದಲೂ ಬೆನ್​ ಸ್ಟೋಕ್ಸ್ ಆ ತಂಡದ ಪರ ಆಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ರೈಸಿಂಗ್ ಪುಣೆ ಸೂಪರ್​ ಜೇಂಟ್ಸ್​ ತಂಡದ ಪರ 2016 ಮತ್ತು 2017ರಲ್ಲಿ ಆಡಿದ್ದರು. 2018ರಲ್ಲಿ ರಾಯಲ್ಸ್​ ಪರ 14 ವಿಕೆಟ್ಸ್​ ಮತ್ತು 319 ರನ್​ಗಳಿಸಿದ್ದರು.

ABOUT THE AUTHOR

...view details