ಕರ್ನಾಟಕ

karnataka

By

Published : Jul 11, 2020, 5:48 PM IST

ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ 4,000 ರನ್​,150 ವಿಕೆಟ್: ದಾಖಲೆ ಬರೆದ ಬೆನ್​ಸ್ಟೋಕ್ಸ್​

117 ದಿನಗಳ ಬಳಿಕ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ನ ವಿಕೆಟ್​ ಕೀಪರ್​ ಡೋರಿಚ್​ ಅವರ ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಹಾಗೂ 4,000 ರನ್​ಗಳಿಸಿದ ವಿಶ್ವದ 6ನೇ ಹಾಗೂ ಇಂಗ್ಲೆಂಡ್​ನ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಬೆನ್​ ಸ್ಟೋಕ್ಸ್​ 150 ವಿಕೆಟ್ಸ್​
ಬೆನ್​ ಸ್ಟೋಕ್ಸ್​ 150 ವಿಕೆಟ್ಸ್​

ಸೌತಾಂಪ್ಟನ್​:ವೆಸ್ಟ್​ ಇಂಡೀಸ್​ ವಿರುದ್ಧ ಇಂಗ್ಲೆಂಡ್​ ತಂಡದ ನಾಯಕನಾಗಿ ಕಣಕ್ಕಿಳಿದಿರುವ ಬೆನ್​ಸ್ಟೋಕ್ಸ್ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

117 ದಿನಗಳ ಬಳಿಕ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ನ ವಿಕೆಟ್​ ಕೀಪರ್​ ಡೋರಿಚ್​ ಅವರ ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಹಾಗೂ 4,000 ರನ್​ಗಳಿಸಿದ ವಿಶ್ವದ 6ನೇ ಹಾಗೂ ಇಂಗ್ಲೆಂಡ್​ನ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

‘ಬೆನ್​ಸ್ಟೋಕ್ಸ್​ಗೂ ಮೊದಲು ವೆಸ್ಟ್​ ಇಂಡೀಸ್​ನ ಗ್ಯಾರಿ ಸೋಬರ್ಸ್​, ಇಂಗ್ಲೆಂಡ್​ನ ಇಯಾನ್ ಬೋಥಮ್​, ಭಾರತದ ಕಪಿಲ್​ ದೇವ್​, ಕಿವೀಸ್​ ಡೇನಿಯಲ್​ ವಿಟೋರಿ ಹಾಗೂ ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್​ ಈ ಸಾಧನೆ ಮಾಡಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಸದ್ಯದ ಮಟ್ಟಿಗೆ ಇಂಗ್ಲೆಂಡ್​ 204 ರನ್​ಗಳಿಗೆ ಆಲೌಟ್​ ಆಗಿದೆ. ಇದಕ್ಕುತ್ತರವಾಗಿ ವೆಸ್ಟ್​ ಇಂಡೀಸ್ 318ರನ್​ಗಳಿಗೆ ಆಲೌಟ್​ ಆಗಿದೆ. ಇತ್ತ ಎರಡನೇ ಇನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೆ 62 ರನ್​ಗಳಿಸಿದೆ.

ABOUT THE AUTHOR

...view details