ಮುಂಬೈ:ಫೆಬ್ರವರಿ 16ರಂದು 2021ರ ಐಪಿಎಲ್ಗೆ ಮಿನಿ ಹರಾಜು ನಡೆಯುವ ಸಾಧ್ಯತೆಯಿದ್ದು, ಫೆಬ್ರವರಿ 4ರೊಳಗೆ ಫ್ರಾಂಚೈಸಿ ಕೈಬಿಟ್ಟ ಆಟಗಾರರು ಸೇರಿದಂತೆ ಎಲ್ಲಾ ರಾಜ್ಯದ ಕ್ರಿಕೆಟಿಗರು ಹರಾಜಿನಲ್ಲಿ ತಮ್ಮ ಹೆಸರನ್ನು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
14ನೇ ಐಪಿಎಲ್ನಲ್ಲಿ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಜನವರಿ 20 ಕೊನೆಯ ದಿನಾಂಕವಾಗಿದ್ದು, ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಸೂಚನೆ ನೀಡಿದೆ. ಇನ್ನು ಐಪಿಎಲ್ ಒಪ್ಪಂದ ಹೊಂದಿಲ್ಲದ ಆಟಗಾರರು 2021ರ ಹರಾಜಿಗೆ ಫೆಬ್ರವರಿ 4ರೊಳಗೆ ಹೆಸರನ್ನು ನೋಂದಾಯಿಸಲು ಸೂಚನೆ ಹೊರಡಿಸಿದೆ. ಇನ್ನು ಮೂಲ ದಾಖಲೆಗಳನ್ನು ಫೆಬ್ರವರಿ 12ರ ಒಳಗಾಗಿ ಸಲ್ಲಿಸಲು ಗಡುವು ನೀಡಲಾಗಿದೆ.
ಈ ಸಂಬಂಧ ಬಿಸಿಸಿಐ ಎಲ್ಲಾ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಮೇಲ್ ಕಳುಹಿಸಿದೆ. ಅಲ್ಲದೆ ಆಟಗಾರರು ಕ್ರಿಕೆಟ್ ಅಸೋಸಿಯೇಷನ್ ಜೊತೆಗೆ ಮಾತ್ರ ಸಂವಹನ ನಡೆಸಬೇಕಿದೆ. ಆಟಗಾರರು ಯಾವುದೇ ಏಜೆಂಟ್ ಅಥವಾ ಮ್ಯಾನೇಜರ್ ಜೊತೆ ಸಂಪರ್ಕ ನಡೆಸುವುವಂತಿಲ್ಲ. ಒಂದು ವೇಳೆ ಇದರಲ್ಲಿ ಏನಾದರೂ ಸಮಸ್ಯೆ ಆದರೆ ತಕ್ಷಣ 2021ರ ಹರಾಜು ಪಟ್ಟಿಯಿಂದ ಅಂತಹ ಆಟಗಾರರ ಹೆಸರನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಬೇಕೆಂಬ ಆಟಗಾರರು ತಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೂಲಕವೇ ತಮ್ಮ ಹೆಸರನ್ನು ಕಳುಹಿಸಿಕೊಡಬೇಕೆಂದು ಬಿಸಿಸಿಐ ತಿಳಿಸಿದೆ.
ಇದನ್ನು ಓದಿ:ಜೋ ರೂಟ್ ದ್ವಿಶಕತದ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತ: ಇನ್ನಿಂಗ್ಸ್ ಸೋಲು ತಪ್ಪಿಸಲು ತಿರಿಮನ್ನೆ ಹರಸಾಹಸ