ಡಾಕಾ :ತಾವೂ ಐಪಿಎಲ್ ಆಡುವ ಸಲುವಾಗಿ ಬಿಸಿಬಿಗೆ ಬರೆದ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಆಲ್ರೌಂಡರ್ ಶಕಿಬ್ ಅಲ್ ಹಸನ್ ಹೇಳಿದ ನಂತರ ಅವರ ಐಪಿಎಲ್ ಎನ್‌ಒಸಿ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಿದೆ ಎಂದು ಬಿಸಿಬಿ ತಿಳಿಸಿದೆ.
ಭಾನುವಾರ ಶಕಿಬ್ ಅಲ್ ಹಸನ್, ತಾವೂ ಶ್ರೀಲಂಕಾ ತಂಡದ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಐಪಿಎಲ್ ಆಡುವ ನಿರ್ಧಾರವನ್ನು ಬಿಸಿಬಿ ತಪ್ಪಾಗಿ ನಿರೂಪಿಸಿದೆ ಎಂದು ಹೇಳಿದ್ದರು.
ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಮನೆಯಲ್ಲಿ ಸಭೆ ನಡೆಸಿ ಮಾಧ್ಯಮದ ಜೊತೆ ಮಾತನಾಡಿದ ಕ್ರಿಕೆಟ್ ಆಪರೇಷನ್ಸ್ ಅಧ್ಯಕ್ಷ ಅಕ್ರಮ್ ಖಾನ್, ಶಕಿಬ್ರ ಎನ್‌ಒಸಿ ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಕೊಹ್ಲಿ-ಬಟ್ಲರ್ ಮಾತಿನ ಚಕಮಕಿ ಬಗ್ಗೆ ಕೊನೆಗೂ ಮೌನ ಮುರಿದ ಮಾರ್ಗನ್
ನಾನು ಅವರು ಬರೆದ ಪತ್ರವನ್ನು ಓದಿಲ್ಲ ಎಂದು ಅವರು ನಿನ್ನೆ ಹೇಳಿರುವುದನ್ನು ನಾನು ಕೇಳಿದ್ದೇನೆ. ಬಹುಶಃ ನಾನು ಅವರ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ಅವರು ಟೆಸ್ಟ್ ಆಡಲು ಬಯಸುತ್ತಾರೆ ಎಂದು ತಿಳಿದು ಬಂದಿದೆ. ಮುಂದಿನ ಎರಡು ದಿನಗಳಲ್ಲಿ ಅವರ ಎನ್‌ಒಸಿ ಬಗ್ಗೆ ಚರ್ಚಿಸುತ್ತೇವೆ. ಅವರಿಗೆ ಆಸಕ್ತಿ ಇದ್ದರೆ ಅವರು ಶ್ರೀಲಂಕಾದಲ್ಲಿ ಟೆಸ್ಟ್ ಆಡಲಿ ಎಂದು ತಿಳಿಸಿದ್ದಾರೆ.
ಆದರೆ, ಐಪಿಎಲ್‌ನಲ್ಲಿ ಆಡಲು ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದೇನೆ ಎಂದು ಶಕೀಬ್ ಪತ್ರದಲ್ಲಿ ಕ್ರಿಕೆಟಿಗ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದು ಖಾನ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಟೆಸ್ಟ್ ಸರಣಿಯನ್ನಾಡಲಿದೆ.
ಆದರೆ, ಬಾಂಗ್ಲಾ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆ ಸರಣಿ ಆಡುವುದಕ್ಕಿಂತ ಐಪಿಎಲ್ ಆಡಿದರೆ ಮುಂಬರುವ ಟಿ20 ವಿಶ್ವಕಪ್ಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದು ನನ್ನ ಉದ್ದೇಶ ಎಂದು ಶಕಿಬ್ ತಿಳಿಸಿದ್ದರು.