ಸೌಥಾಂಪ್ಟನ್: ಶಕಿಬ್(51) ಹಾಗೂ ಮುಶ್ಫಿಕರ್ ರಹೀಮ್(83) ರ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನದ ವಿರುದ್ಧ 263 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಅಫ್ಘಾನಿಸ್ತಾನ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ನೀಡಿತು. ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಆರಂಭಿಕನಾಗಿ ಬಡ್ತಿ ಪಡೆದು ಬಂದಿದ್ದ ಲಿಟ್ಟನ್ ದಾಸ್ ಕೇವಲ 16 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ಹಿರಿಯ ಆಟಗಾರ ತಮೀಮ್(36) ಹಾಗೂ ಶಕಿಬ್(51) ಎರಡನೇ ವಿಕೆಟ್ಗೆ 59 ರನ್ಗಳ ಜೊತೆಯಾಟ ನೀಡಿದರು.
53 ಎಸೆತಗಳಲ್ಲಿ 36 ರನ್ಗಳಿಸಿದ್ದ ತಮೀಮ್ರನ್ನು ನಬಿ ಕ್ಲೀನ್ ಬೌಲ್ಡ್ ಮಾಡಿದರು. ಇವರ ಬೆನ್ನಲ್ಲೇ ಶಕಿಬ್ 69 ಎಸೆತಗಳಲ್ಲಿ 1 ಬೌಂಡರಿ ಸಿಡಿಸಿ 51 ರನ್ಗಳಿಸಿದ್ದ ಶಕಿಬ್ ಅಲ್ ಹಸನ್ ಕೂಡ ಔಟಾದರು. ನಂತರ ಬಂದ ಸೌಮ್ಯ ಸರ್ಕಾರ್ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು.