ಕರ್ನಾಟಕ

karnataka

ETV Bharat / sports

ಬಾಂಗ್ಲಾದೇಶದ ಬೌಲಿಂಗ್​ ಕೋಚ್​ಗಳಾದ ವಿಟೋರಿ-ಲಾಂಗ್​ವೆಲ್ಡ್​​

ವಿಶ್ವಕಪ್​ವರೆಗೆ ಬೌಲಿಂಗ್​ ಕೋಚ್​ ಆಗಿದ್ದ ಕಾರ್ಟ್ನಿ ವಾಲ್ಸ್ ಬದಲಿಗೆ​  ಚಾರ್ಲ್​ ಲಾಂಗ್​ವೆಲ್ಡ್​  ಆಗಿ ಆಯ್ಕೆಯಾಗಿದ್ದಾರೆ. ಕಿವೀಸ್​ ಮಾಜಿ ಸ್ಪಿನ್ನರ್ ಡೇನಿಯಲ್​ ವಿಟೋರಿ 100 ದಿನಗಳ ಅಲ್ಪಾವಧಿ ಸ್ಪಿನ್​ ಬೌಲಿಂಗ್​ ಕೋಚ್​ ಆಗಿ ಆಯ್ಕೆಯಾಗಿದ್ದಾರೆ.

Bowling Coaches

By

Published : Jul 28, 2019, 2:20 PM IST

ಡಾಕಾ: ವಿಶ್ವಕಪ್​ ನಂತರ ಕೋಚ್​ಗಳನ್ನು ಬದಲಾಯಿಸುತ್ತಿರುವ ಬಾಂಗ್ಲಾದೇಶ ತಂಡ ನ್ಯೂಜಿಲ್ಯಾಂಡ್​ನ ಮಾಜಿ ಸ್ಪಿನ್ನರ್​ ಡೇನಿಯಲ್​ ವಿಟೋರಿ ಹಾಗೂ ದಕ್ಷಿಣ ಆಫ್ರಿಕಾ ಚಾರ್ಲ್​ ಲಾಂಗ್​ವೆಲ್ಡ್​ರನ್ನು ಬೌಲಿಂಗ್​ ಕೋಚ್​ಗಳಾಗಿ ಆಯ್ಕೆ ಮಾಡಿಕೊಂಡಿದೆ.

ವಿಶ್ವಕಪ್​ವರೆಗೆ ಬೌಲಿಂಗ್​ ಕೋಚ್​ ಆಗಿದ್ದ ಕಾರ್ಟ್ನಿ ವಾಲ್ಸ್ ಬದಲಿಗೆ​ ಚಾರ್ಲ್​ ಲಾಂಗ್​ವೆಲ್ಡ್​ ಆಗಿ ಆಯ್ಕೆಯಾಗಿದ್ದಾರೆ. ಕಿವೀಸ್​ ಮಾಜಿ ಸ್ಪಿನ್ನರ್ ಡೇನಿಯಲ್​ ವಿಟೋರಿ 100 ದಿನಗಳ ಅಲ್ಪಾವಧಿ ಸ್ಪಿನ್​ ಬೌಲಿಂಗ್​ ಕೋಚ್​ ಆಗಿ ಆಯ್ಕೆಯಾಗಿದ್ದಾರೆ. ಇವರ ಕೋಚಿಂಗ್​ ಅವಧಿ 2020ರ ಟಿ20 ವಿಶ್ವಕಪ್​ವರೆಗೆ ಇರುತ್ತದೆ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್​ ಹಸನ್​ ತಿಳಿಸಿದ್ದಾರೆ.​

ವಿಟೋರಿ ಇತ್ತೇಚಿಗೆ ಆರ್ಸಿಬಿ ಹೆಡ್​ ಕೋಚ್​ ಹುದ್ದೆಯಿಂದ ಹೊರಬಂದಿದ್ದರು. ಜೊತೆಗೆ ಬಿಬಿಎಲ್​ನ ಬ್ರಿಸ್ಬೇನ್​ ಹೀಟ್ಸ್​ ಬೌಲಿಂಗ್​ ಕೋಚ್​ ಅವಧಿ ಮುಗಿದಿದ್ದರಿಂದ ಅದನ್ನು ರಿನಿವಲ್​ ಮಾಡಿಕೊಂಡಿರಲಿಲ್ಲ, ಇದೀಗ ಬಾಂಗ್ಲದೇಶದ ಬೌಲಿಂಗ್​ ಕೋಚ್​​ ಆಗಲು ಒಪ್ಪಿಗೆ ಸೂಚಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ 72 ಏಕದಿನ, 6 ಟೆಸ್ಟ್​ ಹಾಗೂ 12 ಟಿ20 ಪಂದ್ಯಗಳನ್ನಾಡಿರುವ ಲಾಂಗ್​ವೆಲ್ಡ್​​ 2010 ರಲ್ಲಿ ತಮ್ಮ ವೃತ್ತಿ ಬದುಕಿಗೆ ನಿವೃತ್ತ ಘೋಷಿಸಿದ್ದರು. ಈ ಹಿಂದೆ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ​ ತಂಡಗಳ ಬೌಲಿಂಗ್​ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು ಬಾಂಗ್ಲಾದೇಶ ತಂಡ ಮುಖ್ಯ ತರಬೇತುದಾರ ಸ್ಥಾನಕ್ಕೆ ಇನ್ನು ಯಾರು ಆಯ್ಕೆಯಾಗಿಲ್ಲ. ಈಗಾಗಲೆ ಕೆಲವರ ಹೆಸರನ್ನು ಪಟ್ಟಿ ಮಾಡಿದ್ದು, ಕೆಲವೇ ದಿನಗಳಲ್ಲಿ ಕೋಚ್ ಹೆಸರನ್ನು​ ಅಂತಿಮಗೊಳಿಸಲಾಗುವುದು ಎಂದು ಹಸನ್​ ತಿಳಿಸಿದ್ದಾರೆ.

ABOUT THE AUTHOR

...view details