ಹೈದರಾಬಾದ್:ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್ ಸಂಜಿದಾ ಇಸ್ಲಾಮ್ ತಮ್ಮ ವೆಡ್ಡಿಂಗ್ ಫೋಟೋ ಶೂಟ್ಅನ್ನು ಕ್ರಿಕೆಟ್ ಮೈದಾನದಲ್ಲಿ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಕ್ರಿಕೆಟ್ ಪ್ರೇಮಕ್ಕೆ ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ ವ್ಯಕ್ತವಾಗುತ್ತಿದೆ.
ಸಂಜಿದಾ ಇತ್ತೀಚೆಗೆ ಬಾಂಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟರ್ ಮಿಮ್ ಮೊಸದೀಕ್ ಅವರನ್ನು ವಿವಾಹವಾಗಿದ್ದಾರೆ. ಈ ಪೋಟೋಶೂಟ್ನಲ್ಲಿ ಸಂಜಿದಾ, ಕವರ್ ಡ್ರೈವ್, ಫುಲ್ಶಾಟ್ ಆಡುತ್ತಿರುವುದು ಕಂಡುಬಂದಿದೆ.