ಕರ್ನಾಟಕ

karnataka

ETV Bharat / sports

ಇದಲ್ವಾ ಕ್ರೀಡಾ ಸ್ಫೂರ್ತಿ... ಪ್ಯಾಂಟ್​ ಕಳಚಿ ಬೀದ್ರೂ ಚೆಂಡು ಹಿಡಿದು ರನ್​ಔಟ್​ ಮಾಡಿದ ಆಸೀಸ್​ ಕ್ರಿಕೆಟಿಗ

ಆಸ್ಟ್ರೇಲಿಯಾದ ಕ್ರಿಕೆಟರ್​ ಲಾಬುಶೇನ್​ ದೇಶಿ ಕ್ರಿಕೆಟ್​ ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್​ಮನ್​ ಹೊಡೆದ ಚೆಂಡನ್ನು ಹಿಡಿಯುವ ಸಂದರ್ಭದಲ್ಲಿ ಪ್ಯಾಂಟ್​ ಕಳಚಿ ಬೀಳುತ್ತಿದ್ದರೂ ರನ್​ಔಟ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್​ ಆಗುತ್ತಿದೆ.

Australian cricketer

By

Published : Sep 30, 2019, 1:56 PM IST

Updated : Dec 15, 2019, 11:56 AM IST

ಮೆಲ್ಬೋರ್ನ್​: ಕ್ರಿಕೆಟ್​ ಮೈದಾನದಲ್ಲಿ ರನ್​ ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ವೇಳೆ ಹಲವಾರು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ. ಅದು ಮೈದಾನದಲ್ಲಿ ಸಾಮಾನ್ಯ ಸಂಗತಿಯಾಗಿದ್ದ ಅಂತಹದ್ದೇ ಘಟನೆ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್​ ವೇಳೆ ನಡೆದಿದೆ.

ಆ್ಯಶಸ್​ ಸರಣಿಯ ವೇಳೆ ಸ್ಟಿವ್​ ಸ್ಮಿತ್​ ನಂತರ ಆಸ್ಟ್ರೇಲಿಯಾ ತಂಡದಲ್ಲಿ ಕೇಳಿಬಂದ ಹೆಸರೇ ಮಾರ್ನಸ್​ ಲಾಬುಶೇನ್​. ಇದೀಗ ಆ್ಯಶಸ್​ ಸರಣಿ ಮುಗಿದ ಬಳಿಕ ದೇಶಿ ಕ್ರಿಕೆಟ್​ಗೆ ಮರಳಿರುವ ಮಾರ್ನಸ್​ ಆ್ಯರೋನ್​ ಫಿಂಚ್​ ನೇತೃತ್ವದ ವಿಕ್ಟೋರಿಯಾ ವಿರುದ್ಧದ ಏಕದಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುವಾಗ ಚೆಂಡನ್ನು ಹಿಡಿಯಲು ಯತ್ನಿಸಿದಾಗ ಪ್ಯಾಂಟ್​ ಕಳಚಿಕೊಂಡರೂ ರನ್​ಔಟ್​ ಮಾಡಲು ಯಶಸ್ವಿಯಾದ ಘಟನೆ ಸಂಬಂಧಿಸಿದೆ.

ಪ್ಯಾಂಟ್​ ಕಳಚಿ ಬಿದ್ದರೂ ರನ್​ ಔಟ್​ ಮಿಸ್​ ಅಗ್ಲಿಲ್ಲ!

ಕ್ವೀನ್ಸ್​ಲ್ಯಾಂಡ್​ ತಂಡದ ಪರ ಆಡುತ್ತಿರುವ ಲಾಬುಶೇನ್​ ಎದುರಾಳಿ ತಂಡದ ಡಿಲ್​ ಸದರ್​ಲ್ಯಾಂಡ್ ಬಾರಿಸಿದ ಚೆಂಡನ್ನು ವೇಗವಾಗಿ ಹಿಡಿಯಲು ಓಡಿದಾಗ ಪ್ಯಾಂಟ್​ ಜಾರಿಕೊಂಡಿದೆ. ಆದರೆ ಅದನ್ನು ಲೆಕ್ಕಿಸದ ಲಾಬುಶೇನ್​ ಚೆಂಡನ್ನು ಹಿಡಿದು ಕೀಪರ್​ಗೆ ಎಸೆದು ಎದುರಾಳಿ ಬ್ಯಾಟ್ಸ್​ಮನ್​ ರನ್​ಔಟ್​ಗೆ ಕಾರಣರಾಗಿದ್ದಾರೆ.

ಈ ವಿಡಿಯೋವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಟ್ಚಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಲಾಬುಶೇನ್​ ಅವರ ಕ್ರೀಡೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Last Updated : Dec 15, 2019, 11:56 AM IST

ABOUT THE AUTHOR

...view details