ಸಿಡ್ನಿ:ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದ ಮೊದಲ ಸೆಷನ್ ಮುಕ್ತಾಯವಾಗಿದ್ದು, ರಿಷಭ್ ಪಂತ್ ಅವರ ಅಕ್ರಮಣಕಾರಿ ಆಟದ ನೆರವಿನಿಂದ ಭಾರತ 206 ರನ್ ಗಳಿಸಿದೆ.
ಭಾರತ ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಐದನೇ ದಿನದ ಆರಂಭದಲ್ಲಿ ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ನಿರಾಸೆ ಅನುಭವಿಸಿತು. ದಿನದ ಎರಡನೇ ಓವರ್ನಲ್ಲೇ ನಾಯಕ ಅಜಿಂಕ್ಯಾ ರಹಾನೆ ಕೇವಲ 4 ರನ್ ಗಳಿಸಿ ಲಿಯಾನ್ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಜೊತೆಯಾದ ರಿಷಭ್ ಪಂತ್ ಮತ್ತು ಪೂಜಾರ ಆಸೀಸ್ ಬೌಲರ್ಗಳ ಬೆವರಿಳಿಸಿದ್ರು. ಒಂದೆಡೆ ಪೂಜಾರ ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತಿದ್ದರೆ ಮತ್ತೊಂದೆಡೆ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ಗೆ ಮೊರೆ ಹೋಗಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಗಾಯಗೊಂಡಿದ್ದ ಕಾರಣ ನಾಲ್ಕನೇ ದಿನ ಮೈದಾನಕ್ಕಿಳಿಯದ ಪಂತ್ ಇಂದು ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆಕರ್ಷಕ ಬೌಂಡರಿ, ಸಿಕ್ಸರ್ ಸಿಡಿಸಿ ಅರ್ಧಶತಕ ಪೂರ್ಣಗೊಳಿಸಿದ್ರು. 4ನೇ ವಿಕೆಟ್ಗೆ ಈ ಜೋಡಿ 104 ರನ್ ಒಟ್ಟುಗೂಡಿಸಿದ್ದು, ಪಂದ್ಯ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದೆ.
ಭೋಜನ ವಿರಾಮದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ. ಪೂಜಾರ 41 ಮತ್ತು ರಿಷಭ್ ಪಂತ್ 72 ರನ್ ಗಳಿಸಿದ್ದು, ಪಂದ್ಯ ಗೆಲ್ಲಲು 201 ರನ್ ಬೇಕಿದೆ.