ಸಿಡ್ನಿ: ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು 51 ರನ್ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದುಕೊಂಡಿದೆ.
390 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದಲ್ಲಿ ಶಿಖರ್ ಧವನ್ ಮತ್ತು ಮಯಾಂಕ್ ಅರ್ವಾಲ್ ಉತ್ತಮವಾಗಿ ಇನ್ನಿಂಗ್ಸ್ ಆರಂಭಿಸಿದ್ರು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾದ ಧವನ್ 30 ರನ್ ಗಳಿಸಿ ಔಟ್ ಆದ್ರು.
ಮುಂದಿನ ಓವರ್ನಲ್ಲೇ 28 ರನ್ ಗಳಿಸಿದ್ದ ಮಯಾಂಕ್ ಕೂಡ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರು ಆಟಗಾರರು ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಅಯ್ಯರ್ 38 ರನ್ ಗಳಿಸಿ ಔಟ್ ಆದ್ರು.
ನಂತರ ಜೊತೆಯಾದ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಕೂಡ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು. ಈ ಇಬ್ಬರು 3ನೇ ವಿಕೆಟ್ಗೆ 73 ರನ್ಗಳ ಜೊತೆಯಾಟವಾಡಿದ್ರು.
ಈ ನಡುವೆ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 59 ಅರ್ಧಶತಕ ಪೂರೈಸಿದ್ರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಿರಾಟ್ 89 ರನ್ ಗಳಿಸಿ ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದ್ರು.
ನಾಯಕನ ನಿರ್ಗಮನದ ನಂತರ ರಾಹುಲ್ ಮತ್ತು ಪಾಂಡ್ಯ ಕೂಡ 53 ರನ್ಗಳ ಜೊತೆಯಾಟವಾಡಿದ್ರು, ಏಕದಿನ ಕ್ರಿಕೆಟ್ನಲ್ಲಿ 8ನೇ ಅರ್ಧಶತಕ ಪೂರೈಸಿದ ರಾಹುಲ್ ಟೀಂ ಇಂಡಿಯಾಗೆ ಗೆಲುವಿನ ಭರವಸೆ ತಂದುಕೊಟ್ಟಿದ್ರು. ಆದರೆ, ಜಂಪಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ರು.
ನಂತರ ಬಂದ ಜಡೇಜಾ ಕೆಲ ಸಿಕ್ಸ್ರ್ಗಳಿಂದ ಪ್ರೇಕ್ಷಕರನ್ನು ರಂಜಿಸಿ 11 ಎಸತದಲ್ಲಿ 24 ರನ್ ಸಿಡಿಸಿ ಔಟ್ ಆದ್ರು. ಪಾಂಡ್ಯ ಕೂಡ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ 3, ಹೆಜಲ್ವುಡ್ 2, ಜಂಪಾ 2, ಹೆನ್ರಿಕ್ಯೂಸ್ ಹಾಗೂ ಮ್ಯಾಕ್ಸ್ವೆಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು.