ಬರ್ಮಿಂಗ್ಹ್ಯಾಮ್: ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟಿವ್ ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ 487 ರನ್ ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು, ಆಂಗ್ಲರಿಗೆ 398 ರನ್ಗಳ ಗುರಿ ನೀಡಿದೆ.
128 ರನ್ಗಳ ಹಿನ್ನೆಡೆಯೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ 112 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 487 ರನ್ ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿದೆ. ವಾರ್ನರ್ 8, ಬ್ಯಾನ್ಕ್ರಾಫ್ಟ್ 7, ಖವಾಜ 40, ಸ್ಟಿವ್ ಸ್ಮಿತ್ 142, ಟ್ರೇವಿಸ್ ಹೆಡ್ 51, ಮ್ಯಾಥ್ಯೂ ವೇಡ್ 110, ಟಿಮ್ ಪೇನ್ 34 ರನ್ ಗಳಿಸಿ ಔಟಾದರೆ, ಸ್ಫೋಟಕ ಆಟವಾಡಿದ ಜೇಮ್ಸ್ ಪ್ಯಾಟಿನ್ಸನ್ 4 ಸಿಕ್ಸರ್, 2 ಬೌಂಡರಿ ಸಹಿತ 47 ರನ್ ಹಾಗೂ ಕಮ್ಮಿನ್ಸ್ 26 ರನ್ ಗಳಿಸಿ ಔಟಾಗದೆ ಉಳಿದುಕೊಂಡರು.