ಕರ್ನಾಟಕ

karnataka

ETV Bharat / sports

ಯೋಜನೆ, ಶಿಸ್ತು ಮತ್ತು ಧೈರ್ಯದಿಂದ ಮುನ್ನುಗ್ಗಿ: 2ನೇ ಟೆಸ್ಟ್​ಗೂ ಮನ್ನ ಟೀಂ ಇಂಡಿಯಾಗೆ ಸಚಿನ್​ ಸಲಹೆ - ​ sಚಿನ್ ತೆಂಡೂಲ್ಕರ್​ ಇತ್ತೀಚಿನ ಸುದ್ದಿ

ಭಾರತ ತಂಡ 0-1ರಲ್ಲಿ ಬಾರ್ಡರ್​- ಗವಾಸ್ಕರ್​ ಸರಣಿಯಲ್ಲಿ ಹಿನ್ನಡೆ ಸಾಧಿಸಿದೆ. ಮೊದಲ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಸೋಲು ಕಂಡಿರುವ ಭಾರತ ತಂಡ ಡಿಸೆಂಬರ್​ 26ರಿಂದ ಬಾಕ್ಸಿಂಗ್​ ಡೇ ಟೆಸ್ಟ್​ ಆಡಲಿದೆ. ಈ ಪಂದ್ಯಕ್ಕಾಗಿ ಸಚಿನ್​ ಕೆಲವು ಟಿಪ್ಸ್​ ನೀಡಿದ್ದಾರೆ.

ಭಾರತ  vs ಆಸ್ಟ್ರೇಲಿಯಾ
ಸಚಿನ್ ತೆಂಡೂಲ್ಕರ್​

By

Published : Dec 24, 2020, 8:11 PM IST

ಹೈದರಾಬಾದ್​: ಮೊದಲ ಟೆಸ್ಟ್​ ಪಂದ್ಯದ ಅವಮಾನಕರ ಸೋಲಿನ ನಂತರ ಎರಡನೇ ಟೆಸ್ಟ್​ ಪಂದ್ಯಕ್ಕೆ ಸಿದ್ಧವಾಗುತ್ತಿರುವ ಭಾರತ ತಂಡಕ್ಕೆ ಲೆಜೆಂಡ್​​ ಬ್ಯಾಟ್ಸ್​ಮನ್​​ ಸಚಿನ್​ ತೆಂಡೂಲ್ಕರ್​ ಸ್ಫೂರ್ತಿದಾಯಕ ಮಾತುಗಳಿಂದ ಹುರಿದುಂಬಿಸಿದ್ದು, ಶಿಸ್ತು, ಯೋಜನೆ ಮತ್ತು ಧೈರ್ಯವಂತಿಕೆ ತೋರಿಸುವ ಮೂಲಕ ಯಶಸ್ಸು ಸಾಧಿಸಿ ಎಂದು ಹೇಳಿದ್ದಾರೆ.

ಭಾರತ ತಂಡ 0-1ರಲ್ಲಿ ಬಾರ್ಡರ್​- ಗವಾಸ್ಕರ್​ ಸರಣಿಯಲ್ಲಿ ಹಿನ್ನಡೆ ಸಾಧಿಸಿದೆ. ಮೊದಲ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಸೋಲು ಕಂಡಿರುವ ಭಾರತ ತಂಡ ಡಿಸೆಂಬರ್​ 26ರಿಂದ ಬಾಕ್ಸಿಂಗ್​ ಡೇ ಟೆಸ್ಟ್​ ಆಡಲಿದೆ. ಈ ಪಂದ್ಯಕ್ಕಾಗಿ ಸಚಿನ್​ ಕೆಲವು ಟಿಪ್ಸ್​ ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ

"ತಂತ್ರಗಾರಿಕೆ ತುಂಬಾ ಸಿಂಪಲ್. ನೀವು ಹೆಚ್ಚು ರನ್ ​ಗಳಿಸಿ, ಎದುರಾಳಿಯನ್ನು ನಿಮಗಿಂತ ಹೆಚ್ಚು ರನ್​ ಗಳಿಸಲು ಅನುವು ಮಾಡಿಕೊಡಬೇಡಿ. ಇದೊಂದನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಮುಂದಿನ ಮೂರು ಟೆಸ್ಟ್​ ಪಂದ್ಯಗಳಲ್ಲಿ ಧೈರ್ಯದಿಂದ ಆಡಿ. ಧೈರ್ಯ, ಶಿಸ್ತು ಮತ್ತು ಯೋಜನೆಗಳ ಸಂಯೋಜನೆಯೊಂದಿಗೆ ಮುನ್ನಡೆಯಬೇಕು. ನಾವು ಯೋಜನೆಗಳನ್ನು ಹೊಂದಿರಬೇಕು, ನಂತರ ನಾವು ಧೈರ್ಯವಂತಿಕೆ ತೋರಬೇಕು ಮತ್ತು ನಾವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಫಲರಾಗಬೇಕು" ಎಂದು ತೆಂಡೂಲ್ಕರ್​ ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಜೊತೆಗೆ ಪದೇ ಪದೆ ತಂಡದಲ್ಲಿ ಬದಲಾವಣೆ ಮಾಡುವುದನ್ನು ಬಿಟ್ಟು ಒಂದೇ ತಂಡಕ್ಕೆ ಅಂಟಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು ಎಂದು 47 ವರ್ಷದ ಮಾಜಿ ಆಟಗಾರ ಹೇಳಿದ್ದಾರೆ. ತಕ್ಷಣ ಬದಲಾವಣೆಯಾದರೆ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುತ್ತದೆ. ಆದರೆ ಒಂದೇ ತಂಡಕ್ಕೆ ಅಂಟಿಕೊಂಡರೆ ಯಶಸ್ಸು ಸಾಧಿಸಬಹುದು. ಏಕೆಂದರೆ ಹಿಂದಿನ ತಂಡದ ಯಶಸ್ಸಿಗೆ ಅವರೇ ಕಾರಣರಾಗಿರುತ್ತಾರೆ ಎಂದು ಸಚಿನ್​ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details