ಕರ್ನಾಟಕ

karnataka

ETV Bharat / sports

ವಿಶ್ವ ಇಲೆವೆನ್ ವಿರುದ್ಧದ ಟಿ-20ಗೆ ಏಷ್ಯಾ ತಂಡ ಪ್ರಕಟ: ಕೊಹ್ಲಿ, ರಾಹುಲ್​ ಸೇರಿ ಭಾರತದ 6 ಆಟಗಾರರಿಗೆ ಮಣೆ - ಏಷ್ಯಾ ಇಲೆವೆನ್​ vs ವಿಶ್ವ ಇಲೆವೆನ್

ಕೊಹ್ಲಿ, ರಾಹುಲ್​ ಸೇರಿದಂತೆ 6 ಆಟಗಾರರು ಏಷ್ಯಾ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಶ್ರೀಲಂಕಾದ ಇಬ್ಬರು, ನೇಪಾಳದ ಒಬ್ಬ, ಅಫ್ಘಾನಿಸ್ತಾನದ ಇಬ್ಬರು ಹಾಗೂ ಬಾಂಗ್ಲಾದೇಶದ 4 ಆಟಗಾರರು ವಿಶ್ವ ಇಲೆವೆನ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ.

Asia XI vs World XI
ವಿಶ್ವ ಇಲೆವೆನ್ vs ಏಷ್ಯಾ ಇಲೆವೆನ್

By

Published : Feb 25, 2020, 6:20 PM IST

ಮುಂಬೈ: ಬಾಂಗ್ಲಾದೇಶ ಆಯೋಜಿಸಲಿರುವ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್​ ಇಲೆವೆನ್ ನಡುವಿನ 3 ಪಂದ್ಯಗಳ ಟಿ-20 ಸರಣಿಗೆ 15 ಸದಸ್ಯರ ತಂಡ ಪ್ರಕಟಿಸಿದ್ದು, ಇದರಲ್ಲಿ ಭಾರತದ 6 ಆಟಗಾರರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಕರೆಯಲ್ಪಡುವ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್​ ಐಸಿಸಿ ಅನುಮತಿ ಪಡೆದು ಈ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ.

ಮಂಗಳವಾರ ಘೋಷಿಸಿದ 15 ಸದಸ್ಯರ ತಂಡದಲ್ಲಿ ಏಷ್ಯಾ ಇಲೆವೆನ್ ತಂಡದ ಪರ ಟೀಂ ಇಂಡಿಯಾದ ಆರು ಆಟಗಾರರು ಸೇರಿದ್ದಾರೆ. ಆದರೆ ಈ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಭಾಗವಹಿಸಲು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇನ್ನು ಶ್ರೀಲಂಕಾದ ಇಬ್ಬರು, ಅಫ್ಘಾನಿಸ್ತಾನದ ಇಬ್ಬರು, ಬಾಂಗ್ಲಾದೇಶದ 4 ಹಾಗೂ ನೇಪಾಳದ ಏಕೈಕ ಆಟಗಾರನಾಗಿ ಸಂದೀಪ್​ ಲೆಮಿಚ್ಚಾನೆ ಅವಕಾಶ ಪಡೆದಿದ್ದಾರೆ.

ವಿಶ್ವ ಇಲೆವೆನ್​

ವಿಶ್ವ ಇಲೆವೆನ್​ ತಂಡವನ್ನು ಘೋಷಣೆ ಮಾಡಿದ್ದು, ಇದರಲ್ಲಿ ವಿಂಡೀಸ್​ ದಿಗ್ಗಜ ಕ್ರಿಸ್​ ಗೇಲ್​, ಇಂಗ್ಲೆಂಡ್​ನ ಜಾನಿ ಬೈರ್ಸ್ಟೋವ್​ ಸೇರಿದಂತೆ ವಿವಿಧ ದೇಶಗಳ 12 ಆಟಗಾರರು ಇದ್ದಾರೆ.

ಆದರೆ ಏಷ್ಯಾ ಇಲೆವೆನ್​ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರರನ್ನು ಬಿಸಿಬಿ ಸೇರಿಸಿಲ್ಲ. ಪಾಕಿಸ್ತಾನದ ಆಟಗಾರರ ಭಾಗವಹಿಸುವಿಕೆಯನ್ನ ರಾಜಕೀಯ ಕಾರಣಗಳಿಂದ ಬಿಸಿಸಿಐ ವಿರೋಧಿಸಿತ್ತು. ಇದಕ್ಕಾಗಿ ಬಿಸಿಬಿ ಕೂಡ ಪಿಸಿಬಿಗೆ ಯಾವುದೇ ಆಹ್ವಾನ ನೀಡಿಲ್ಲ.

ಏಷ್ಯಾ ಇಲೆವೆನ್​: ಕೆ.ಎಲ್​.ರಾಹುಲ್​, ಶಿಖರ್​ ಧವನ್​, ವಿರಾಟ್​ ಕೊಹ್ಲಿ, ರಿಷಭ್​ ಪಂತ್​, ಕುಲ್ದೀಪ್​ ಯಾದವ್​, ಮೊಹಮ್ಮದ್​ ಶಮಿ, ತಿಸಾರ ಪೆರೆರಾ, ಲಸಿತ್​ ಮಾಲಿಂಗ, ರಶೀದ್​ ಖಾನ್​, ಮುಜೀಬ್​ ಉರ್​ ರಹಮಾನ್​, ಮುಸ್ತಫಿಜುರ್​ ರಹಮಾನ್​, ತಮೀಮ್​ ಇಕ್ಬಾಲ್​, ಲಿಟ್ಟನ್​ ದಾಸ್, ಸಂದೀಪ್​ ಲೆಮಿಚ್ಚಾನೆ.

ವಿಶ್ವ ಇಲೆವೆನ್​: ಅಲೆಕ್ಸ್​ ಹೇಲ್ಸ್​, ಕ್ರಿಸ್​ ಗೆಲ್​, ಫಾಫ್​ ಡು ಪ್ಲೆಸಿಸ್​(ನಾಯಕ), ನಿಕೋಲಸ್​ ಪೂರನ್​, ಬ್ರೆಂಡನ್​ ಟೇಲರ್​, ಜಾನಿ ಬೈರ್ಸ್ಟೋವ್​, ಕೀರನ್​ ಪೊಲಾರ್ಡ್​, ಆದಿಲ್​ ರಶೀದ್​, ಶೆಲ್ಡಾನ್​ ಕಾಟ್ರೆಲ್​, ಲುಂಗಿ ಎಂಗಿಡಿ, ಆ್ಯಂಡ್ರಿವ್​ ಟೈ, ಮಿಚೆಲ್​ ಮೆಕ್ಲೆನಾಘನ್‌.

ABOUT THE AUTHOR

...view details