ಅಹ್ಮದಾಬಾದ್ :ಭಾರತ ತಂಡದ ಆಪ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ಜಹೀರ್ ಖಾನ್(597)ರನ್ನು ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ 28ನೇ ಓವರ್ನಲ್ಲಿ ಒಲಿ ಪೋಪ್ ವಿಕೆಟ್ ಪಡೆಯುವ ಮೂಲಕ ಮೂರು ಮಾದರಿಯ ಕ್ರಿಕೆಟ್ನಲ್ಲಿ 599 ಬಲಿ ಪಡೆದ ಬೌಲರ್ ಎನಿಸಿದರು. ಅವರು ಪ್ರಸ್ತುತ ಅನಿಲ್ ಕುಂಬ್ಳೆ(953), ಹರ್ಭಜನ್ ಸಿಂಗ್(707) ಮತ್ತು ಕಪಿಲ್ ದೇವ್(687) ನಂತರದ ಸ್ಥಾನದಲ್ಲಿದ್ದಾರೆ.