ಕರ್ನಾಟಕ

karnataka

ETV Bharat / sports

ಆ್ಯಶಸ್​ ಟೆಸ್ಟ್​ ಸರಣಿ: ಮುಂದುವರಿದ ಸ್ಮಿತ್​ ಆರ್ಭಟ, ಎರಡನೇ ಇನ್ನಿಂಗ್ಸ್​ನಲ್ಲೂ ಭರ್ಜರಿ ಶತಕ - ಆಸ್ಟ್ರೇಲಿಯಾ- ಇಂಗ್ಲೆಂಡ್​

ಮೊದಲ ಇನ್ನಿಂಗ್ಸ್​ನಲ್ಲಿ 144 ರನ್ ​ಗಳಿಸಿದ್ದ ಸ್ಟಿವ್​ ಸ್ಮಿತ್​ ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.

Ashes test series

By

Published : Aug 4, 2019, 6:21 PM IST

ಬರ್ಮಿಂಗ್​ಹ್ಯಾಮ್​: ಒಂದು ವರ್ಷ ಕ್ರಿಕೆಟ್​ನಿಂದ ನಿಷೇಧದ ಶಿಕ್ಷೆ ಅನುಭವಿಸಿ ಮತ್ತೆ ಟೆಸ್ಟ್​ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಎರಡನೇ ಇನ್ನಿಂಗ್ಸ್​ನಲ್ಲೂ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ತಾವೊಬ್ಬ ಟೆಸ್ಟ್​ ಚಾಂಪಿಯನ್​ ಬ್ಯಾಟ್ಸ್​ಮನ್​ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೊದಲ ಇನ್ನಿಂಗ್ಸ್​​​ನಲ್ಲಿ 17 ರನ್​ಗೆ ಎರಡು ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗಿಳಿದಿದ್ದ ಸ್ಟಿವ್​ ಸ್ಮಿತ್​ 10ನೇಯವರಾಗಿ ವಿಕೆಟ್​ ಒಪ್ಪಿಸಿದ್ದರು. ಈ ವೇಳೆ 8 ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಏಕಾಂಗಿಯಾಗಿ ಹೋರಾಡಿದ್ದ ಸ್ಮಿತ್​ 144 ರನ್​ ಗಳಿಸಿ ಔಟಾಗಿದ್ದರು. ಅವರು ಔಟಾಗುವ ಮುನ್ನ 16 ಬೌಂಡರಿ ಹಾಗೂ 2 ಸಿಕ್ಸರ್​ ಸಿಡಿಸಿದ್ದರು.

ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. 146 ಎಸೆತಗಳಲ್ಲಿ ಶತಕ ಪೂರೈಸಿದ ಸ್ಟಿವ್​ ಸ್ಮಿತ್​ ವೃತ್ತಿ ಜೀವನದ 25 ನೇ ಶತಕ ದಾಖಲಿಸಿದರು. ಇವರ ಇನ್ನಿಂಗ್ಸ್​ನಲ್ಲಿ10 ಬೌಂಡರಿ ಸೇರಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ತಂಡ 284 ರನ್​ಗಳಿಗೆ ಆಲೌಟ್​ ಆಗಿತ್ತು. ನಂತರ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ ರೋನಿ ಬರ್ನ್ಸ್​ ಅವರ ಶತಕದ ನೆರವಿನಿಂದ 374 ರನ್ ​ಗಳಿಸಿ, 90 ರನ್​ಗಳ ಮುನ್ನಡೆ ಸಾಧಿಸಿತ್ತು.

ABOUT THE AUTHOR

...view details