ಕರ್ನಾಟಕ

karnataka

By

Published : Sep 17, 2019, 8:13 PM IST

Updated : Sep 17, 2019, 8:21 PM IST

ETV Bharat / sports

ಲಡಾಕ್‌ನಲ್ಲಿ ಕ್ರೀಡಾ ಅಕಾಡೆಮಿ ತೆರೆಯುವ ಪ್ರಸ್ತಾಪ ಕೇಂದ್ರದ ಮುಂದಿದೆ: ಅನುರಾಗ್ ಠಾಕೂರ್

ಕೇಂದ್ರಾಡಳಿತ ಪ್ರದೇಶ ಲಡಾಕ್‌ನ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವುದಕ್ಕಾಗಿ ಕ್ರಿಕೆಟ್​ ಆಕಾಡೆಮಿ ಹಾಗೂ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಕೇಂದ್ರ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್​ ಠಾಕೂರ್ ತಿಳಿಸಿದ್ರು.

Anurag Thakur

ಲಡಾಕ್​:ಲಡಾಕ್‌ನ ಪ್ರತಿಭಾವಂತ ಕ್ರೀಡಾಪಟುಗಳಿಗಾಗಿ​ ಕ್ರೀಡಾ ಅಕಾಡೆಮಿ ತೆರೆಯುವ ಆಲೋಚನೆಯನ್ನು ಕೇಂದ್ರ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಬಿಚ್ಚಿಟ್ಟಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬದ ಪ್ರಯುಕ್ತ ಲಡಾಕ್​ನಲ್ಲಿ ಸೈನಿಕರ ಜೊತೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ವಿಚಾರ ತಿಳಿಸಿದ್ರು.

ಕ್ರೀಡೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಸದಾ ನಾನು ಮುಂದಿರುತ್ತೇನೆ. ಏಕೆಂದರೆ ಅವರು ಸ್ವಯಂ ಅಭಿವೃದ್ಧಿಯಲ್ಲಿ ಮುಂದಿರುತ್ತಾರೆ. ಅವರಿಗೆ ಬೇಕಾದ ವೇದಿಕೆಯನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ. ಹೀಗಾಗಿ ಲಡಾಕ್​ನಲ್ಲಿ ಎಲ್ಲಾ ಧರ್ಮದ ಯುವಕರಿಗೆ ಸರಿಸಮನಾದ ಅವಕಾಶ ಕಲ್ಪಿಸಿಕೊಡಲು ಕ್ರಿಕೆಟ್​ ಹಾಗೂ ಕ್ರೀಡಾ ಅಕಾಡೆಮಿ ತೆರೆಯುವ ಯೋಜನೆ ಹೊಂದಿದ್ದು, ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದೇನೆ ಎಂದು ಹೇಳಿದ್ರು.

Last Updated : Sep 17, 2019, 8:21 PM IST

ABOUT THE AUTHOR

...view details