ಕರ್ನಾಟಕ

karnataka

ETV Bharat / sports

ಕನ್ನಡಿಗ​ ಕುಂಬ್ಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಲಿ ಅಂದ್ರು ಸೆಹ್ವಾಗ್​! - ಕ್ರಿಕೆಟ್​ ಆಯ್ಕೆ ಸಮಿತಿ ಮುಖ್ಯಸ್ಥ

ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಆಯ್ಕೆಮಾಡಿಕೊಳ್ಳಬೇಕು ಎಂದು ಸ್ಪೋಟಕ ಮಾಜಿ ಬ್ಯಾಟ್ಸ್​​ಮನ್​ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ಅನಿಲ್​ ಕುಂಬ್ಳೆ/Anil Kumble

By

Published : Aug 22, 2019, 5:27 PM IST

ಮುಂಬೈ: ಟೀಂ ಇಂಡಿಯಾದ ಕೋಚ್​ ಆಗಿ ಈಗಾಗಲೇ ಸೇವೆ ಸಲ್ಲಿಸಿರುವ ಮಾಜಿ ಆಟಗಾರ ಅನಿಲ್​ ಕುಂಬ್ಳೆ ಆಯ್ಕೆ ಸಮಿತಿ ಮುಖ್ಯಸ್ಥರಾಗಲಿ ಎಂದು ಸ್ಪೋಟಕ ಮಾಜಿ ಬ್ಯಾಟ್ಸ್​​ಮನ್​ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ಅನಿಲ್​ ಕುಂಬ್ಳೆ ಬಳಿ ಈ ಹುದ್ದೆಯನ್ನ ಸರಿಯಾಗಿ ನಿಭಾಯಿಸುವ ಶಕ್ತಿಯಿದೆ. ಕುಂಬ್ಳೆ ಬಳಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಸಾಮರ್ಥ್ಯವಿದ್ದು, ಆಯ್ಕೆಗಾರರ ಅಧ್ಯಕ್ಷ ಸ್ಥಾನಕ್ಕೆ ಓರ್ವ ಆದರ್ಶ ವ್ಯಕ್ತಿಯಾಗುತ್ತಾರೆ. ಈಗಾಗಲೇ ಸಚಿನ್​​ ತೆಂಡೂಲ್ಕರ್​​, ಸೌರವ್​ ಗಂಗೂಲಿ, ರಾಹುಲ್ ದ್ರಾವಿಡ್​ರಂತಹ ದಿಗ್ಗಜ ಆಟಗಾರರೊಂದಿಗೆ ಆಡಿರುವ ಹಾಗೂ ಯುಕ ಪ್ಲೇಯರ್ಸ್​​ಗಳಿಗೆ ತರಬೇತಿ ನೀಡಿದ್ದಾರೆ ಎಂದು ಸೆಹ್ವಾಗ್​ ಹೇಳಿದ್ದಾರೆ.

ವಿರೇಂದ್ರ ಸೆಹ್ವಾಗ್​

ಸದ್ಯ ಎಂಎಸ್​ಕೆ ಪ್ರಸಾದ್​​ ನೇತೃತ್ವದ ಸಮಿತಿ, ಆಟಗಾರರನ್ನ ಆಯ್ಕೆ ಮಾಡುವಾಗ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಜವಾಬ್ದಾರಿಯನ್ನ ಅವರಿಗೆ ನೀಡಬೇಕು ಎಂದು ಸೆಹ್ವಾಗ್​ ಹೇಳಿದ್ದಾರೆ. 2007-08ರಲ್ಲಿ ನಾನು ಆಸ್ಟ್ರೇಲಿಯಾ ಸರಣಿಗಾಗಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿದಾಗ ಕುಂಬ್ಳೆ ಖುದ್ದಾಗಿ ನನ್ನ ರೂಮ್​ಗೆ ಬಂದು ಮುಂದಿನ ಎರಡು ಟೆಸ್ಟ್​ಗಳಿಂದ ನಿಮ್ಮನ್ನ ಕೈಬಿಡುವುದಿಲ್ಲ ಎಂದು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರು ಎಂದು ಇದೇ ವೇಳೆ ಹೇಳಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷರು ಇದೀಗ ಪ್ರತಿ ತಿಂಗಳು ಬಿಸಿಸಿಐನಿಂದ 1 ಕೋಟಿ ರೂ ಸ್ಯಾಲರಿ ಪಡೆದುಕೊಳ್ಳುತ್ತಿದ್ದು, ಕುಂಬ್ಳೆ ಇದಕ್ಕೆ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಬಿಸಿಸಿಐ ಇದರಲ್ಲಿ ಹೆಚ್ಚಳ ಮಾಡಬೇಕು ಎಂದಿದ್ದಾರೆ.

ABOUT THE AUTHOR

...view details