ಮುಂಬೈ: ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಬೌಂಡರಿಗಳ ಆಧಾರದ ಮೇಲೆ ವಿನ್ನರ್ ಎಂದು ಘೋಷಿಸಿರುವ ಐಸಿಸಿ ನಿಯಮದ ವಿರುದ್ಧ ಅನೇಕ ಮಾಜಿ ಕ್ರಿಕೆಟರ್ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಐಸಿಸಿಯ ನಿಯಮವನ್ನು ತಮಾಷೆಯಾಗಿ ಟ್ರೋಲ್ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್ 241 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡ 241 ರನ್ಗಳಿಸಿತು. ವಿಜೇತರಿಗಾಗಿ ಸೂಪರ್ ಓವರ್ ಮೊರೆ ಹೋಗಲಾಯಿತಾದರೂ ಅಲ್ಲೂ ಕೂಡ ಎರಡೂ ತಂಡಗಳು 15 ರನ್ ಗಳಿಸಿದವು. ಕೊನೆಗೆ ಐಸಿಸಿ ನಿಯಮದ ಪ್ರಕಾರ, ಹೆಚ್ಚು ಬೌಂಡರಿಗಳಿಸಿದ ಇಂಗ್ಲೆಂಡ್ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಯಿತು.