ನವದೆಹಲಿ :ಐಪಿಎಲ್ನ ಸೂಪರ್ ಜೋಡಿಯಾಗಿರುವ ಎಬಿಡಿ ಮತ್ತು ವಿರಾಟ್ ಕೊಹ್ಲಿ ಕಳೆದ 9 ವರ್ಷಗಳಿಂದ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಇವರು ತಂಡದಲ್ಲಿ ಕೇವಲ ಸಹ ಆಟಗಾರರಾಗಿರುವುದಕ್ಕಿಂತಲೂ ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದಾರೆ.
ಕಳೆದ ಒಂಬತ್ತು ಸೀಸನ್ಗಳಿಂದ ಕೊಹ್ಲಿ ಆಟವನ್ನು ಗಮನಿಸುತ್ತಿರುವ ಎಬಿಡಿ, ಕೊಹ್ಲಿಯನ್ನು ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ಗೆ ಹೋಲಿಕೆ ಮಾಡಿದ್ದಾರೆ.
ಜಿಂಬಾಬ್ವೆಯ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಪೊಮ್ಮಿ ಎಂಬಂಗ್ವಾ ಜೊತೆ ನಡೆಸಿದ ಇನ್ಸ್ಟಾಗ್ರಾಮ್ ಸಂವಾದದ ವೇಳೆ ವಿರಾಟ್ ಸಹಜವಾಗಿ ಹಾಗೂ ತುಂಬಾ ಸುಲಭವಾಗಿ ರನ್ಗಳಿಸುವ ಕೌಶಲ್ಯ ಹೊಂದಿದ್ದಾರೆ. ಹೀಗಾಗಿ ಅವರು ಟೆನ್ನಿಸ್ ದಂತಕತೆ ರೋಜರ್ ಫೆಡರರ್ ಇದ್ದಂತೆ ಎಂದು ಮಿಸ್ಟರ್ 360 ಕೊಹ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ.
36ರ ವಯಸ್ಸಿನ ಎಬಿಡಿ ಕೊಹ್ಲಿಗೆ ಪ್ರತಿಸ್ಪರ್ಧಿಯಾಗಿರುವ ಆಸ್ಟ್ರೇಲಿಯಾ ಸ್ಟಿವ್ ಸ್ಮಿತ್ರನ್ನು ಸ್ಪೇನ್ನ ರಾಫೆಲ್ ನಡಾಲ್ಗೆ ಹೋಲಿಕೆ ಮಾಡಿದ್ದಾರೆ. ಕೊಹ್ಲಿ ನೈಸರ್ಗಿಕವಾಗಿ ಚೆಂಡನ್ನು ದಂಡಿಸುತ್ತಾರೆ. ಆದರೆ, ಸ್ಮಿತ್ ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗಿದ್ದಾರೆ. ಅವರು ನಡಾಲ್ ಇದ್ದಂತೆ ಎಂದು ಹೋಲಿಕೆ ಮಾಡಿದ್ದಾರೆ.
ಮಾನಸಿಕವಾಗಿ ಪ್ರಬಲರಾಗಿರುವ ಸ್ಮಿತ್ ರನ್ ಗಳಿಸಲು ಸುಲಭ ದಾರಿಯನ್ನು ಕಂಡುಕೊಳ್ಳುತ್ತಾರೆ. ಆದರೆ, ಕೊಹ್ಲಿ ತಮ್ಮ ಸ್ವಾಭಾವಿಕ ಆಟದಿಂದ ವಿಶ್ವದ ಯಾವ ಪಿಚ್ನಲ್ಲಾದರೂ ರನ್ ಗಳಿಸುವಲ್ಲಿ ಸಫಲರಾಗಿದ್ದಾರೆ. ಅವರೇ ನನ್ನ ನೆಚ್ಚಿನ ಆಯ್ಕೆ ಎಂದು ಎಬಿಡಿ ವಿವರಿಸಿದ್ದಾರೆ.