ಕೇಪ್ಟೌನ್:ದಕ್ಷಿಣ ಆಫ್ರಿಕಾ ತಂಡದ ಮಾಜಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತಗೊಂಡಿದ್ದು, ಈ ದಿನಾಂಕದೊಳಗೆ ತಂಡಕ್ಕೆ ಲಭ್ಯರಾಗುವಂತೆ ಕೋಚ್ ಮಾರ್ಕ್ ಬೌಚರ್ ಅವರಿಗೆ ಸೂಚನೆ ನೀಡಿದ್ದಾರೆ.
ವಿಶ್ವಕಪ್ ಆಡ್ಬೇಕಾದರೆ, ಈ ದಿನಾಂಕದೊಳಗೆ ಲಭ್ಯರಾಗಿ...ಎಬಿಡಿಗೆ ಡೆಡ್ಲೈನ್ ನೀಡಿದ ಹರಿಣಗಳ ಕೋಚ್! - ದಕ್ಷಿಣ ಆಫ್ರಿಕಾ ಕ್ರಿಕೆಟ್
ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳಲು ಮುಂದಾಗಿರುವ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ಗೆ ಕೋಚ್ ಬೌಚರ್ ಡೆಡ್ಲೈನ್ ನೀಡಿದ್ದು, ಆ ದಿನಾಂಕದೊಳಗೆ ತಂಡಕ್ಕೆ ಲಭ್ಯರಾಗುವಂತೆ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ -20 ಸರಣಿಗಳಿಗಾಗಿ ಈಗಾಗಲೇ ದಕ್ಷಿಣ ಆಫ್ರಿಕಾ ತಂಡ ಆಯ್ಕೆಗೊಂಡಿದ್ದು, ಇಲ್ಲಿ ಎಬಿಡಿ ವಿಲಿಯರ್ಸ್ ಅವಕಾಶ ಪಡೆದುಕೊಂಡಿಲ್ಲ. ಮುಂಬರುವ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ವೇಳೆಗೆ ಅವರು ತಂಡ ಸೇರಿಕೊಳ್ಳುವುದು ಬಹುತೇಕ ಖಚಿತಗೊಂಡಿದ್ದು, ಈ ವೇಳೆಗೆ ತಂಡಕ್ಕೆ ಲಭ್ಯವಿರುವಂತೆ ಕೋಚ್ ಹೇಳಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಂಡದ ಕೋಚ್ ಮಾರ್ಕ್ ಬೌಚರ್ ಜೂನ್ 1ರೊಳಗಾಗಿ ತಂಡಕ್ಕೆ ಲಭ್ಯರಾಗಿ ಎಂದು ಹೇಳಿದ್ದಾರೆ. ಇವರ ಜತೆಗೆ ಕ್ರಿಸ್ ಮೊರಿಸ್ ಹಾಗೂ ಇಮ್ರಾನ್ ತಾಹೀರ್ಗೂ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ. ಮುಂಬರುವ ಐಸಿಸಿ ವಿಶ್ವಕಪ್ನಲ್ಲಿ ಭಾಗಿಯಾಗುವಂತೆ ದಕ್ಷಿಣ ಆಫ್ರಿಕಾದ ಕೋಚ್ ಬೌಚರ್ ಎಬಿಡಿ ಬಳಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ತಾವು ತಂಡಕ್ಕೆ ಕಮ್ಬ್ಯಾಕ್ ಮಾಡುವುದಾಗಿ ಸಹ ಮಿ.360 ಹೇಳಿಕೊಂಡಿದ್ದರು.