ಮೆಲ್ಬೋರ್ನ್:ಕೊರೊನಾ ವೈರಸ್ ತಂದಿಟ್ಟಿರುವ ಆವಾಂತರ ಒಂದೆರಡಲ್ಲ. ಈಗಾಗಲೇ ನಿಗದಿಯಾಗಿರುವ ದಿನಾಂಕದಂತೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅನೇಕ ಕ್ರೀಡಾಕೂಟಗಳ ದಿನಾಂಕ ಮುಂದೆ ಹೋಗಿದೆ. ಈ ಮಧ್ಯೆ ಕೆಲ ಕ್ರಿಕೆಟರ್ಸ್ ಮದುವೆ ಕೂಡ ಕೊರೊನಾದಿಂದ ನಡೆಯುತ್ತಿಲ್ಲ.
ಜಂಪಾ, ಶಾರ್ಟ್ ಸೇರಿ ಎಂಟು ಕ್ರಿಕೆಟರುಗಳ ಮದುವೆ ಮುಂದೂಡಿದ ಕೊರೊನಾ - ಕೋವಿಡ್-19
ಕೋವಿಡ್-10 ನಿಂದ ಹೊರಬರಲು ಇಡೀ ವಿಶ್ವವೇ ಸೆಣಸಾಟ ನಡೆಸುತ್ತಿದೆ. ಆಸ್ಟ್ರೇಲಿಯಾದ ಎಂಟು ಮಂದಿ ಕ್ರಿಕೆಟ್ ಪ್ಲೇಯರ್ಸ್ ತಮ್ಮ ಮದುವೆ ಕಾರ್ಯಕ್ರಮ ಮುಂದೂಡಿದ್ದಾರೆ.
8 Australian cricketers have postponed their weddings
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ, ವೇಗದ ಬೌಲರ್ಗಳಾದ ಆಂಡ್ರೂ ಟೈ, ಜಾಕ್ಸನ್ ಬ್ರಿಡ್, ಆರಂಭಿಕ ಆಟಗಾರ ಡಿ ಶಾರ್ಟ್ ಜತೆಗೆ ಮಿಚೆಲ್ ಸ್ವೆಪ್ಸನ್, ಅಲಿಸ್ಟರ್ ಮೆಕ್ ಡೆರ್ಮಾಟ್,ಹೆಸ್ ಜಾನ್ಸನ್ ಮತ್ತು ಕ್ಯಾಟಲಿನ್ ಫ್ರೈಟ್ ಅವರ ವಿವಾಹ ಕಾರ್ಯಕ್ರಮ ಸೋಂಕಿನ ಕಾರಣದಿಂದ ಪೋಸ್ಟ್‌ಪೋನ್ ಆಗಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಲಿಜೆಲಿ ಲೀ ಮದುವೆ ಕಾರ್ಯಕ್ರಮವೂ ನಿಗದಿಯಂತೆ ನಡೆಯುತ್ತಿಲ್ಲ. ಆಸಿಸ್ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೂ ಕೂಡ ಕೊರೊನಾ ನಿರಾಸೆ ಮೂಡಿಸಿದೆ.