ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪರಿಪೂರ್ಣ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಲೆಜೆಂಡ್ಗಳಿಂದಲೇ ಬೆಸ್ಟ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಎಲ್ಲ ಫಾರ್ಮೆಟ್ ಕ್ರಿಕೆಟ್ನಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಉಳಿಸಿಕೊಂಡಿರುವ ಏಕೈಕ ಬ್ಯಾಟ್ಸ್ಮನ್. ಪ್ರಸಕ್ತ ಸಾಲಿನ ಯಾವುದೇ ಒಬ್ಬ ಬ್ಯಾಟ್ಸ್ಮನ್ ಕೊಹ್ಲಿ ದಾಖಲೆ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗುತ್ತಿಲ್ಲ . ತಮ್ಮ ಅಹಂಕಾರ ಮನೋಭಾವ ಹಾಗೂ ರೆಕಾರ್ಡ್ನ ಬ್ರೇಕಿಂಗ್ ಗುಣ ಇವರಲ್ಲಿ ಲೀನವಾಗಿದೆ. ಸಚಿನ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಮುರಿಯಲು ಸಾಧ್ಯವಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಕೊಹ್ಲಿ ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕ ಸಿಡಿಸಿದ್ದು ಸಚಿನ್ ದಾಖಲೆಯನ್ನು ಬೆಂಬಿಡಿದ ಹಿಂಬಾಲಿಸಿದ್ದಾರೆ. ಎರಡೂ ಇನ್ನಿಂಗ್ಸ್ಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಬ್ಯಾಟ್ಸ್ಮನ್ ಆಗಿರುವ ಕೊಹ್ಲಿ ವಿಶ್ವದ ಅತ್ಯುತ್ತಮ ಚೇಸರ್ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಚೇಸಿಂಗ್ ಮಾಡುವ ವೇಳೆ 20 ಶತಕ ಭಾರತಕ್ಕೆ ಜಯ ತಂದುಕೊಟ್ಟಿದೆ. ಕೊಹ್ಲಿ ಚೇಸಿಂಗ್ ವೇಳೆ ಸಿಡಿಸಿದ ಅತ್ಯುತ್ತಮ 5 ಶತಕಗಳು ಇಲ್ಲಿವೆ .
118 vs ಆಸ್ಟ್ರೇಲಿಯಾ 2010
2010 ಆಕ್ಟೋಬರ್ನಲ್ಲಿ ವೈಜಾಗ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಕ್ಲಾಸಿಕ್ ಬ್ಯಾಟಿಂಗ್ ಇಡೀ ವಿಶ್ವದ ಮುಂದೆ ಹೊರಬಂದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ 290 ರನ್ಗಗಳ ಟಾರ್ಗೆಟ್ ನೀಡಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ತಂಡ ಆರಂಭದಲ್ಲಿಆರಂಭಿಕರಾದ ಶಿಖರ್ ಧವನ್ ಹಾಗೂ ಮುರುಳಿ ವಿಜಯ್ 35 ರನ್ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕಣಕ್ಕಿಳಿದಿದ್ದ 21 ವರ್ಷದ ಯಂಗ್ ಟೈಗರ್ ಒತ್ತಡದ ಸನ್ನಿವೇಶದಲ್ಲೂ ಅದ್ಭುತ ಬ್ಯಾಟಿಂಗ್ ನಡೆಸಿದ್ದ ತನ್ನ ಹಿಂದಿನ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಕಂಡಿದ್ದ ವೈಫಲ್ಯವನ್ನು ಮೀರಿನಿಂತು ಆಕರ್ಷಕ ಶತಕ ದಾಖಲಿಸಿದ್ದರು.
ಯುವರಾಜ್ ಸಿಂಗ್(58) ಹಾಗೂ ವಿರಾಟ್ ಕೊಹ್ಲಿ (118) ಮೂರನೇ ವಿಕೆಟ್ಗೆ 137 ರನ್ಗಳ ಜೊತೆಯಾಟ ನಡೆಸಿದ್ದರು. ಯುವಿ ಔಟಾದ ನಂತರ ರೈನಾ(71) ನಾಲ್ಕನೇ ವಿಕೆಟ್ಗೆ 84 ರನ್ಗಳ ಜೊತೆಯಾ ನಡೆಸಿ ತಂಡ ಗೆಲುವಿನ ಬಳಿ ಇದ್ದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿದ್ದರು. ಆದರೆ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಕೊಹ್ಲಿ ಪ್ರಮುಖ ಪಾತ್ರವಾಗಿದ್ದರು. ಆಗೆಯತೇ ಚೇಸಿಂಗ್ ಕಿಂಗ್ ಎಂಬ ಹೆಸರಿಗೆ ನಾಂದಿಯಾಡಿದ್ದರು.133* vs ಶ್ರೀಲಂಕಾ 2012
ವಿರಾಟ್ ಕೊಹ್ಲಿ ಹೆಸರು ಭಾರತದಿಂದಾಚೆಗೆ ಕೇಳುವಂತೆ ಮಾಡಿದ್ದೇ ಶ್ರೀಲಂಕಾ ವಿರುದ್ಧ ಸಿಡಿಸಿದ್ದ ಕೊಹ್ಲಿಯ ಶತಕ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಭಾರತ ಫೈನಲ್ಗೇರಲು ಶ್ರೀಲಂಕಾ ನೀಡಿದ್ದ 321ರನ್ಗಖ ಬೃಹತ್ ಮೊತ್ತವನ್ನು 40 ಓವರ್ಗಳಲ್ಲಿ ತಲುಪಬೇಕಿತ್ತು.
ಅದಾಗಲೆ ಸೆಹ್ವಾಗ್ ಹಾಗೂ ಸಚಿನ್ ಬಹುಬೇಗನೆ ವಿಕೆಟ್ ಒಪ್ಪಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗಂಭೀರ್ ಜೊತೆಗೂಡಿದ ಕೊಹ್ಲಿ 116 ರನ್ಗಳ ಜೊತೆಯಾಟ ನೀಡಿದ್ದರು. ವಿಧ್ವಂಸಕ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ ಕೇವಲ 86 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 133 ರನ್ ಸಿಡಿಸಿ ದಾಖಲೆಯ ಜಯಕ್ಕೆ ಕಾರಣರಾಗಿದ್ದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 321 ರನ್ಗಳ ಗುರಿಯನ್ನು 36. 4 ಓವರ್ಗಳಲ್ಲಿ ತಲುಪಿತ್ತು.