ಕರ್ನಾಟಕ

karnataka

ETV Bharat / sports

ಐಪಿಎಲ್​​ನಲ್ಲಿ ಫೇಲ್​ ಆಗಿದ್ರೂ ವಿಶ್ವಕಪ್​​ನಲ್ಲಿ ಇವರದ್ದೇ ಹವಾ... ಬ್ಯಾಟಿಂಗ್​, ಬೌಲಿಂಗ್​​ನಲ್ಲಿ ಮಿಂಚು!

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಲ ಪ್ಲೇಯರ್ಸ್​ ಸದ್ಯ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಮಿಂಚು ಹರಿಸುತ್ತಿದ್ದಾರೆ.

ರೋಹಿತ್​ ಶರ್ಮಾ

By

Published : Jul 2, 2019, 4:15 PM IST

ಲಂಡನ್​:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರನ್​ ಬರ ಹಾಗೂ ವಿಕೆಟ್​ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದ ಕೆಲ ಪ್ಲೇಯರ್​ ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಮಿಂಚು ಹರಿಸುತ್ತಿದ್ದಾರೆ.

ರೋಹಿತ್​ ಶರ್ಮಾ
ಟೀಂ ಇಂಡಿಯಾದ ಉಪ ನಾಯಕ ರೋಹಿತ್​ ಶರ್ಮಾ ಪ್ರಸಕ್ತ ಸಾಲಿನ ಐಪಿಎಲ್​ ಟೂರ್ನಿಯಲ್ಲಿ ರನ್ ಬರ ಎದುರಿಸಿದ್ದರು. 15 ಪಂದ್ಯಗಳಿಂದ ಕೇವಲ 405ರನ್​ಗಳಿಕೆ ಮಾಡಿದ್ದು, ಎರಡು ಅರ್ಧಶತಕ ಸಿಡಿಸಿದ್ದರು.

ಇದೀಗ ವಿಶ್ವಕಪ್​​ನಲ್ಲಿ ಮಿಂಚುತ್ತಿರುವ ರೋಹಿತ್​ ಶರ್ಮಾ, ಏಳು ಪಂದ್ಯಗಳಿಂದ 440ರನ್​ಗಳಿಕೆ ಮಾಡಿದ್ದು, ಇದರಲ್ಲಿ ಮೂರು ಶತಕ ಸೇರಿಕೊಂಡಿವೆ. ಜತೆಗೆ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಬೆನ್​ ಸ್ಟೋಕ್ಸ್​​​
ರಾಜಸ್ಥಾನ ರಾಯಲ್ಸ್​ ತಂಡದ ಪರ ಐಪಿಎಲ್​​ನಲ್ಲಿ ಆಡಿರುವ ಬೆನ್​ ಸ್ಟೋಕ್ಸ್​​​ ಕೇವಲ 123ರನ್​ಗಳಿಕೆ ಮಾಡಿದ್ದು, 6ವಿಕೆಟ್​ ಪಡೆದುಕೊಂಡಿದ್ದರು. ಸದ್ಯ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಈಗಾಗಲೇ 370 ರನ್​ಗಳಿಕೆ ಮಾಡಿರುವ ಆಲ್​ರೌಂಡರ್​​ 6ವಿಕೆಟ್​ ಸಹ ಪಡೆದುಕೊಂಡಿದ್ದಾರೆ.

ಬೆನ್​ ಸ್ಟೋಕ್ಸ್​​

ಶಕೀಬ್​ ಅಲ್​ ಹಸನ್​
ಐಪಿಎಲ್​​ನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದ ಶಕೀಬ್​ ಅಲ್​ ಹಸನ್​, ಇದೀಗ ವಿಶ್ವಕಪ್​​ನಲ್ಲಿ ಬ್ಯಾಟಿಂಗ್​ನಲ್ಲಿ ರನ್​ ಮಳೆ ಹರಿಸುತ್ತಿದ್ದು, ಬೌಲಿಂಗ್​​ನಲ್ಲೂ ಜಾದೂ ಮಾಡ್ತಿದ್ದಾರೆ. 476ರನ್​ಗಳಿಸಿರುವ ಶಕೀಬ್​ 10ವಿಕೆಟ್​ ಪಡೆದುಕೊಂಡಿದ್ದಾರೆ. ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಶಕೀಬ್​ ಹಸನ್​​​

ಮುಜಿಬ್​ ಉರ್​ ರೆಹಮ್ಮಾನ್​
ಅಫ್ಘಾನಿಸ್ತಾನದ ಸ್ಪಿನ್ನರ್​ ರೆಹಮಾನ್​​​ ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ 11 ಪಂದ್ಯಗಳಿಂದ 14 ವಿಕೆಟ್​ ಕಿತ್ತಿದ್ದರು. ಇದೀಗ ಆಡಿರುವ 6ಪಂದ್ಯಗಳಿಂದ 7ವಿಕೆಟ್​ ಕಿತ್ತಿದ್ದಾರೆ. ಜತೆಗೆ ಅಫ್ಘಾನಿಸ್ತಾನ ತಂಡದ ಪರ ಅತಿ ಹೆಚ್ಚು ವಿಕೆಟ್​ ಪಡೆದವರ ಪೈಕಿ 3ನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details