ಕೋಲ್ಕತ್ತಾ:ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಮೊದಲ ಭಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಸ್ಥಳದಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಮುಂದಿನ ಆವೃತ್ತಿಗಾಗಿ ಎಲ್ಲ ಫ್ರಾಂಚೈಸಿಗಳು 85 ಕೋಟಿ ರೂ ಖರ್ಚು ಮಾಡಬಹುದಾಗಿದೆ. ಇದರ ಜತೆಗೆ 3 ಕೋಟಿ ರೂ ಹೆಚ್ಚುವರಿ ಹಣ ಬಳಕೆ ಮಾಡಿಕೊಳ್ಳಬಹುದಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ 8.2ಕೋಟಿ, ರಾಜಸ್ಥಾನ ರಾಯಲ್ಸ್ 7.15 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 06.05ಕೋಟಿ, ಸನ್ರೈಸರ್ಸ್ ಹೈದರಾಬಾದ್ 5.3ಕೋಟಿ, ಪಂಜಾಬ್ 3.07 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 3.2 ಕೋಟಿ, ಮುಂಬೈ ಇಂಡಿಯನ್ಸ್ 3.05 ಕೋಟಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 1.8ಕೋಟಿ ರೂ ಹಣ ಹೊಂದಿದೆ.
ವಿಶೇಷವೆಂದರೆ, ಈ ಹಿಂದಿನ ಎಲ್ಲ ಬಿಡ್ಡಿಂಗ್ ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ನಡೆದಿದ್ದವು. ಆದರೆ ಇದೇ ಮೊದಲ ಸಲ ಬಾಲಿವುಡ್ ನಟ ಶಾರೂಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತವರಿನಲ್ಲಿ ನಡೆಯುತ್ತಿದೆ.