ನವದೆಹಲಿ:ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಇಂಗ್ಲೆಂಡ್ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಕನ್ನಡದ ಪ್ರತಿಭೆಯೊಂದು ಅವಕಾಶ ಪಡೆದುಕೊಂಡಿದೆ.
ಜೂನಿಯರ್ ಸೆಲೆಕ್ಷನ್ ಕಮಿಟಿ ಅಂಡರ್-19 ತಂಡವನ್ನ ಪ್ರಕಟಿಸಿದ್ದು, ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿರುವ ಧ್ರುವ್ ಚಂದ್ ಜುರೆಲ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ಸದ್ಯ ಅಂಡರ್-19 ತಂಡದ ಕ್ಯಾಪ್ಟನ್ ಪ್ರಿಯಾಂ ಗರ್ಗ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದ್ದಾರೆ.
ಆಯ್ಕೆಯಾಗಿರುವ ತಂಡದಲ್ಲಿ ಅನೇಕ ಬದಲಾವಣೆ ಮಾಡಲಾಗಿದ್ದು, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದೊಂದಿಗೆ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿರುವ ಪ್ರಿಯಾಂ ಗರ್ಗ್, ಶುಭಾಂಗ್ ಹೆಗ್ಡೆ, ಯಶಸ್ವಿ ಜೈಸ್ವಾಲ್, ಪ್ರಜ್ಞೇಶ್ ಕಾನ್ಪಿಲೆವಾರ್, ಕಾರ್ತಿಕ್ ತ್ಯಾಗಿ, ಪ್ರಭಾತ್ ಮೌರ್ಯ, ರವಿ ಬಿಷ್ಣೋಯ್, ಸಮೀರ್ ರಿಜ್ವಿ ಮತ್ತು ದಿವ್ಯಾನ್ಶ್ ಸಕ್ಸೇನಾ ತಂಡದಲ್ಲಿ ಚಾನ್ಸ್ ಪಡೆದುಕೊಂಡಿಲ್ಲ.
ಆದರೆ ರಾಯಚೂರಿನ ವೇಗದ ಬೌಲರ್ ವಿದ್ಯಾಧರ್ ಪಾಟೀಲ್ ಅಂಡರ್-19 ತಂಡದಲ್ಲಿ ಚಾನ್ಸ್ ಪಡೆದುಕೊಂಡಿದ್ದು, ಇಂಗ್ಲೆಂಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದುಕೊಂಡು ಮಿಂಚಿದ್ದರು. ಅಂಡರ್-19 ಏಷ್ಯಾಕಪ್ ಸೆಪ್ಟೆಂಬರ್ 3ರಿಂದ 15ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ.
ವೇಗದ ಬೌಲರ್ ವಿದ್ಯಾಧರ್ ಪಾಟೀಲ್ ತಂಡ ಇಂತಿದೆ: ಧ್ರುವ್ ಚಂದ್ ಜುರೆಲ್ (ಕ್ಯಾಪ್ಟನ್/ವಿ,ಕೀ), ಸುವೇದ್ ಪಾರ್ಕರ್, ಠಾಕೂರ್ ತಿಲಕ್ ವರ್ಮಾ, ನೆಹಲ್ ವಢೇರ್, ಅರ್ಜುನ್ ಆಜಾದ್, ಶಶ್ವತ್ ರಾವತ್, ವರುಣ್ ಲವಾಂಡೆ, ಸಲೀಲ್ ಅರೋರಾ, ಕರಣ್ ಲಾಲ್, ಅಥರ್ವ ಅಂಕೋಲೆಕರ್, ಪಂಕಜ್ ಯಾದವ್, ಆಕಾಶ್ ಸಿಂಗ್,ಶುಶಾಂತ್ ಮಿಶ್ರಾ, ಪೂರ್ಣಾಂಕ್ ತ್ಯಾಗಿ, ವಿದ್ಯಾಧರ್ ಪಾಟೀಲ್.