ಹೈದರಾಬಾದ್: ಟೀಂ ಇಂಡಿಯಾ ಕ್ರಿಕೆಟ್ನ ಮುಖ್ಯ ಕೋಚ್ ಹುದ್ದೆಯಲ್ಲಿರುವ ರವಿಶಾಸ್ತ್ರಿ ಟಿ - 20 ವಿಶ್ವಕಪ್ ಬಳಿಕ ಆ ಸ್ಥಾನದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ಅವರು ಬಯಸಿದ್ದೆಲ್ಲವನ್ನೂ ಸಾದಿಸಿದೆ. ಅತಿಥಿ ಹೆಚ್ಚು ದಿನ ಇರಬಾರದು ಎಂದು ಹೇಳಿಕೊಳ್ಳುವ ಮೂಲಕ ಕೋಚ್ ಸ್ಥಾನ ತೊರೆಯುವ ಸುಳಿವು ನೀಡಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಆ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ 2017ರಲ್ಲಿ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿದ್ದ ರವಿಶಾಸ್ತ್ರಿ, 2019ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾಗಿದ್ದರು. ಟಿ - 20 ವಿಶ್ವಕಪ್ ಮುಕ್ತಾಯದೊಂದಿಗೆ ಅವರ ಅವಧಿ ಪೂರ್ಣಗೊಳ್ಳಲಿದ್ದು, ಹೀಗಾಗಿ ಆ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ಲಂಡನ್ ಪ್ರವಾಸದ ವೇಳೆ ಕೋವಿಡ್ ಸೋಂಕಿಗೊಳಗಾಗಿರುವ ರವಿಶಾಸ್ತ್ರಿ 10 ದಿನಗಳ ಕಾಲ ಕ್ವಾರಂಟೈನ್ಗೊಳಗಾಗಿದ್ದು, ಈ ವೇಳೆ 'ದಿ ಗಾರ್ಡಿಯನ್' ಜೊತೆ ಮಾತನಾಡಿದ್ದಾರೆ. ಟಿ-20 ವಿಶ್ವಕಪ್ ತಂಡಕ್ಕೆ ವಿಶೇಷವಾಗಿದೆ. ಆದರೆ, ನಾನು ಕೋಚ್ ಆಗಿದ್ದ ಸಂದರ್ಭದಲ್ಲಿ ತಂಡ ಅನೇಕ ವಿಶೇಷ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.