ಕೊಲಂಬೊ(ಶ್ರೀಲಂಕಾ):ಆತಿಥೇಯ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡ್ತಿಲ್ಲ. ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವ ಅವರು ಟಿ-20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಟಿ-20 ಪಂದ್ಯದ ವೇಳೆ ಇವರು ಮಾಡಿರುವ ಕಾರ್ಯವೊಂದು ಮೆಚ್ಚುಗೆಗೆ ಕಾರಣವಾಗಿದೆ.
ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಪರ ಚಮಿಕಾ ಕರುಣಾರತ್ನೆ ಪದಾರ್ಪಣೆ ಮಾಡಿದ್ದು, ಇವರಿಗೆ ಹಾರ್ದಿಕ್ ಪಾಂಡ್ಯ ಬ್ಯಾಟ್ ಗಿಫ್ಟ್ ಮಾಡಿದರು. ಇದರ ಬಗ್ಗೆ ಲಂಕಾ ಪ್ಲೇಯರ್ಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಿನ್ನೆ ಉಭಯ ತಂಡಗಳ ನಡುವೆ ಮೊದಲನೇ ಟಿ-20 ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಈ ಅಪರೂಪದ ಘಟನೆ ನಡೆಯಿತು.