ಮೆಲ್ಬೋರ್ನ್:ಶ್ರೀಮಂತ ಕ್ರೀಡಾಕೂಟಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಬಾರಿ ಬಂಪರ್ ಬೆಳೆ ಬೆಳೆದಿದ್ದಾರೆ. ಮಿನಿ ಹರಾಜಿನಲ್ಲಿ 17.5 ಕೋಟಿ ರೂಪಾಯಿಗೆ ಮುಂಬೈ ಪಾಲಾದ ಗ್ರೀನ್ಗಿದು ನಂಬಲಸಾಧ್ಯವಾದ ವಿಷಯವಾಗಿದೆ.
ಈ ಬಗ್ಗೆ ಕ್ರಿಕೆಟ್ ಚಾನಲ್ವೊಂದಕ್ಕೆ ಹೇಳಿಕೆ ನೀಡಿರುವ ಕ್ಯಾಮರೂನ್, ನಾನು ಇಷ್ಟು ಮೊತ್ತದ ಬಿಡ್ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಇದು ನಿಜಕ್ಕೂ ನಂಬಲು ಆಗುತ್ತಿಲ್ಲ. ಟಿ20 ಕ್ರಿಕೆಟ್ನಲ್ಲಿ ನಾನು ಸಾಧಿಸುವುದು ಹೆಚ್ಚಿದೆ. ಮುಂಬೈ ತಂಡ ನನ್ನನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ದು, ಕ್ರಿಕೆಟ್ ಜೀವನ ಅತ್ಯುತ್ತಮ ಹಂತವಾಗಿದೆ ಎಂದು ಹೇಳಿದ್ದಾರೆ.
ಹರಾಜಿನಲ್ಲಿ ನಾನು ಬಿಡ್ ಆದಾಗ ಉತ್ತಮ ಮೊತ್ತಕ್ಕೆ ಖರೀದಿ ಕಾಣುತ್ತೇನೆ ಎಂದು ಭಾವಿಸಿದ್ದೆ. ಟಿ-20 ಕ್ರಿಕೆಟ್ನಲ್ಲಿ ಈಗಿನ ನನ್ನ ಸಾಧನೆ ಸಾಲದು. 'ಜೀವಮಾನದ ಮೌಲ್ಯ' ಪಡೆಯುವಷ್ಟು ಸಾಧನೆ ನನ್ನಿಂದ ಇನ್ನೂ ಬಂದಿಲ್ಲ. ಮುಂದೆ ಸಾಧಿಸಬೇಕಾದುದು ಹೆಚ್ಚಿದೆ. ಮುಂಬೈ ತಂಡ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಅದನ್ನು ಸಾಕಾರ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.