ಸೆಂಚುರಿಯನ್:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮುಗಿಯುವ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದ್ದು, ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಮೈದಾನ ತೊರೆದಿದ್ದಾರೆ.
272 ರನ್ಗಳ ಮೊದಲ ದಿನದಾಟದ ಬಳಿಕ ಮೂರನೇ ದಿನ ಕಣಕ್ಕಿಳಿದಿದ್ದ ಭಾರತ ಲುಂಗಿ ಎಂಗಿಡಿ ದಾಳಿಗೆ ಸಿಲುಕಿ ದಿಢೀರ್ ಕುಸಿತ ಕಂಡು 327 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಬೌಲರ್ಗಳ ದಕ್ಷಿಣ ಆಫ್ರಿಕಾ ಆರಂಭಿಕ ನಾಲ್ವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು.
ವೇಗಿ ಜಸ್‌ಪ್ರೀತ್ ಬುಮ್ರಾ ತಾವೆಸದ ಮೊದಲ ಓವರ್ನಲ್ಲೇ ಎದುರಾಳಿ ತಂಡದ ನಾಯಕ ಡೀನ್ ಎಲ್ಗರ್ (1) ವಿಕೆಟ್ ಪಡೆದಿದ್ದರು. ಆದರೆ ತಮ್ಮ ಮೊದಲ ಸ್ಪೆಲ್ನ 6ನೇ ಓವರ್ ಫಾಲೋ ಥ್ರೋ ಎಸೆಯುವಾಗ ಕಾಲು ಉಳುಕಿಸಿಕೊಂಡರು.