ಮುಂಬೈ: ಬಿಸಿಸಿಐ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ಬಿಡುಗಡೆ ಮಾಡಿದ್ದು, ಹಾರ್ದಿಕ್ ಪಾಂಡ್ಯ ಬಿ ನಿಂದ ಎ ಬಡ್ತಿ ಪಡೆದಿದ್ದಾರೆ. ಆದರೆ ಕರ್ನಾಟಕದ ಮನೀಶ್ ಪಾಂಡೆ ಮತ್ತು ಮಹರಾಷ್ಟ್ರದ ಕೇದಾರ್ ಜಾಧವ್ ವಾರ್ಷಿಕ ಗುತ್ತಿಗೆಯಪಟ್ಟಿಯಿಂದ ಹೊರಬಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ವಾರ್ಷಿಕ ಗುತ್ತಿಗೆಯಲ್ಲಿ ಬಿ ಗ್ರೇಡ್ನಲ್ಲಿದ್ದರು. ಇದೀಗ ಎ ಗ್ರೇಡ್ಗೆ ಬಡ್ತಿ ಪಡೆದಿದ್ದಾರೆ. ಆದರೆ, ಭುವನೇಶ್ವರ್ ಕುಮಾರ್ ಎ ನಿಂದ ಬಿ ಗ್ರೇಡ್ಗೆ, ಯುಜ್ವೇಂದ್ರ ಚಹಲ್ ಬಿ ನಿಂದ ಸಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ.
ಯುವ ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇದೇ ಮೊದಲ ಬಾರಿಗೆ ಬಿಸಿಸಿಐನ ವಾರ್ಷಿಕ ಗುತ್ತಿಗೆಗೆ ಸೇರ್ಪಡೆಗೊಂಡಿದ್ದು, ಅವರಿಬ್ಬರು ಸಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
2020ರ ಅಕ್ಟೋಬರ್ನಿಂದ 2021ರ ಸೆಪ್ಟೆಂಬರ್ಗೆ ಈ ಒಪ್ಪಂದ ಚಾಲ್ತಿಯಲ್ಲಿರಲಿದೆ. ಒಟ್ಟು ಬಿಸಿಸಿಐನಲ್ಲಿ ನಾಲ್ಕು ಗ್ರೇಡ್ಗಳಿವೆ. ಎ+ ಗ್ರೇಡ್ನಲ್ಲಿರುವವರ ವಾರ್ಷಿಕವಾಗಿ 7 ಕೋಟಿ ರೂ ಪಡೆಯಲಿದ್ದಾರೆ. ನಂತರ 'ಎ'ನಲ್ಲಿರುವವರಿಗೆ 5, ಬಿ ಗ್ರೇಡ್ ಆಟಗಾರರಿಗೆ 3 ಮತ್ತು ಸಿ ಗ್ರೇಡ್ನಲ್ಲಿರುವವರಿಗೆ 1 ಕೋಟಿ ರೂ ಸಿಗಲಿದೆ.