ಕರ್ನಾಟಕ

karnataka

ETV Bharat / sports

ಕಳಪೆ ಪ್ರದರ್ಶನ​: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು - ಈಟಿವಿ ಭಾರತ ಕನ್ನಡ

ಕಳಪೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನದಿಂದ ಟೀಂ ಇಂಡಿಯಾವು ಬಾಂಗ್ಲಾ ವಿರುದ್ಧ ಹೀನಾಯ ಸೋಲು ಕಂಡಿದೆ.

bangladesh-vs-india-1st-odi
ಬಾಂಗ್ಲಾ ಬಿಗಿ ಬೌಲಿಂಗ್​ಗೆ ನಲುಗಿದ ಟೀಂ ಇಂಡಿಯಾ: 186 ರನ್​ಗೆ ಆಲೌಟ್​

By

Published : Dec 4, 2022, 2:55 PM IST

Updated : Dec 4, 2022, 8:15 PM IST

ಢಾಕಾ (ಬಾಂಗ್ಲಾದೇಶ):ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ರೋಚಕ ಗೆಲುವು ಸಾಧಿಸಿದೆ. ಟೀಂ ಇಂಡಿಯಾದ ಸಾಧಾರಣ ಟಾರ್ಗೆಟ್​ಅನ್ನು 46 ಓವರ್​ಗಳಲ್ಲಿ ಪೂರೈಸಿ ಬಾಂಗ್ಲಾ ಒಂದು ವಿಕೆಟ್​ನಿಂದ​ ಜಯ ದಾಖಲಿಸಿದೆ.

ಢಾಕಾದ ಶೇರ್​ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡ 41.2 ಓವರ್​ಗಳಲ್ಲಿ ಕೇವಲ 186 ರನ್​ ಗಳಿಸಿ ಸರ್ವಪತನ ಕಂಡಿತ್ತು. 187 ರನ್​ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾ 9 ವಿಕೆಟ್​ ಕಳೆದುಕೊಂಡರೂ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದೆ.

ಕಳಪೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ: ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಸೇರಿ ಎಲ್ಲ ವಿಭಾಗಗಲ್ಲೂ ಕಳಪೆ ಪ್ರದರ್ಶನ ತೋರಿದರು. ಇತ್ತ, ಬಾಂಗ್ಲಾದೇಶ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಕೊನೆ ವಿಕೆಟ್‌ನಲ್ಲಿ ಒಂದಾದ ಮೆಹಿದಿ ಹಸನ್ ಮಿರಾಜ್ ಹಾಗೂ ಮಸ್ತಾಫಿಜುರ್ ರಹೆಮಾನ್ ಅಚಲ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾ 1-0 ಅಂತರದ ಮುನ್ನಡೆಯನ್ನು ಸಾಧಿತು.

ಒಂದು ವಿಕೆಟ್​ ಪಡೆಯಲು ತಿಣುಕಾಟ: ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆರಂಭದಲ್ಲಿ ಬಿಗಿ ಬೌಲಿಂಗ್​ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮುನ್ಸೂಚನೆಯನ್ನು ನೀಡಿತ್ತು. 187 ರನ್​ ಗೆಲುವಿನ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ಆಟಗಾರರನ್ನು ಕಟ್ಟಿ ಗೆಲುವಿನ ಆಸೆಯನ್ನೂ ಮೂಡಿಸಿತ್ತು. ಆದರೆ, ಕೊನೆಯ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೆ ಪಂದ್ಯವನ್ನೇ ಟೀಂ ಇಂಡಿಯಾ ಕೈಚೆಲ್ಲಿತು.

ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಇನ್ಸಿಂಗ್​ ಆರಂಭದ ಮೊದಲ ಎಸೆತದಲ್ಲೇ ನಜ್ಮುಲ್ ಹೊಸೈನ್​ ಶೂನ್ಯಕ್ಕೆ ಅವರನ್ನು ದೀಪಕ್​ ಚಹಾರ್​ ಪೆವಿಲಿಯನ್​ಗೆ ಕಳುಹಿಸಿದರು. ನಂತರ ಬಂದ ಅನಾಮುಲ್ ಹಕ್ (14) ಬೇಗ ಓಟಾದರು. ಈ ನಡುವೆ ನಾಯಕ ಲಿಟ್ಟನ್ ದಾಸ್ (41) ಹಾಗೂ ಶಕೀಬ್ ಅಲ್ ಹಸನ್ (29) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸೆಯಾದರು. ಆದರೆ, ಈ ಜೋಡಿಯನ್ನು ವಾಶಿಂಗ್ಟನ್ ಸುಂದರ್‌ ಬೇರ್ಪಡಿಸಿದರು.

ಇತ್ತ, ಸಾಧಾರಣ ಟಾರ್ಗೆಟ್​ ಕಾರಣಕ್ಕೆ ಬಾಂಗ್ಲಾ ಆಟಗಾರರು ಹೆಚ್ಚು ಆತಂಕಕ್ಕೀಡಾಗದೇ ಬ್ಯಾಟ್​ ಬೀಸಿದರು. ಇದರಿಂದ ನಂತರ ಬಂದ ಮುಶ್ಫಿಕರ್ ರಹೀಮ್ (18) ಹಾಗೂ ಮಹಮ್ಮದುಲ್ಲಾ (14) ತಾಳ್ಮೆಯ ಆಟ ಪ್ರದರ್ಶಿಸಿದರು. ಆದರೆ, ಟೀಂ ಇಂಡಿಯಾದ ಬೌಲರ್​​ಗಳನ್ನು ಹೆಚ್ಚು ಕಾಡಿದ್ದು ಮೆಹದಿ ಹಸನ್. ಕೊನೆಯ ವಿಕೆಟ್​ನಲ್ಲಿ ಮೆಹದಿ ಹಸನ್ ಜೊತೆಗೂಡಿದ ಮುಸ್ತಫಿಜುರ್ ರೆಹಮಾನ್ ನೆಲ ಕಚ್ಚಿ ಆಟವಾದರು. ಈ ಒಂದು ವಿಕೆಟ್​ ಪಡೆಯಲು ಭಾರತದ ಬೌಲರ್​ಗಳು ತಿಣುಕಾಟ ನಡೆಸಿದರೂ, ಸಫಲವಾಗಲಿಲ್ಲ.

ಕೊನೆಯವರೆಗೂ ಮೆಹದಿ ಹಸನ್ (38) ಹಾಗೂ ಮುಸ್ತಫಿಜುರ್ ರೆಹಮಾನ್ (10) ಅಜೇಯ ಆಟವಾಡುವ ಮೂಲಕ ಬಾಂಗ್ಲಾಕ್ಕೆ ರೋಚಕ ಗೆಲುವು ತಂದುಕೊಟ್ಟರು. ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಸಿರಾಜ್ 3 ವಿಕೆಟ್​, ಕುಲದೀಪ್ ಸೇನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್​ ಪಡೆದರೆ, ದೀಪಕ್​ ಚಹಾರ್​ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್​ ಪಡೆದರು.

ಬಾಂಗ್ಲಾ ಬೌಲಿಂಗ್​ಗೆ ಭಾರತ ಪರದಾಟ: ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ್ದ ಟೀಂ ಇಂಡಿಯಾ ಆರಂಭದಿಂದಲೇ ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತ್ತು. ಬಾಂಗ್ಲಾ ಬೌಲರ್​ಗಳ ಅದ್ಭುತ ಬೌಲಿಂಗ್​ ಮುಂದೆ ಭಾರತದ ಆಟಗಾರರು ಬ್ಯಾಟ್​ ಬೀಸಲು ಪರದಾಡಿದರು.

ನಿಧಾನಗತಿಯ ಪಿಚ್‌ನಲ್ಲಿ ಶಕೀಬ್ ಅಲ್​ ಹಸನ್ ಪೇಸ್​ ಮತ್ತು ಲೆಂಥ್ ಬೌಲಿಂಗ್​ನಿಂದ ಟೀಂ ಇಂಡಿಯಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ತಾವು ಎಸೆತ 10 ಓವರ್​ಗಳಲ್ಲಿ ಕೇವಲ 36 ರನ್​ ನೀಡಿ ಐದು ವಿಕೆಟ್​ ಕಂಬಳಿಸಿದರು. ಅಲ್ಲದೇ, ಎರಡು ಮೆಡನ್​ ಓವರ್​ಗಳನ್ನು ಶಕೀಬ್ ಅಲ್​ ಹಸನ್ ಎಸೆದರು. ಇತ್ತ, ಎಬಾಡೋಟ್ ಹುಸೇನ್ ಸಹ ಶಾರ್ಟ್ ಬಾಲ್‌ಗಳಲ್ಲಿ 8.2 ಓವರ್‌ಗಳನ್ನು ಎಸೆದು 47 ರನ್​ಗೆ 4 ವಿಕೆಟ್​ ಪಡೆದರು. ಮೆಹಿದಿ ಹಸನ್ ಮಿರಾಜ್ ಒಂದು ವಿಕೆಟ್​ ಪಡೆದಿದ್ದರು.

ಫಲಿಸದ ಕೆಎಲ್ ​ರಾಹುಲ್​ ಆಟ: ಟೀಂ ಇಂಡಿಯಾ ಪರವಾಗಿ ಕೆಎಲ್​ ರಾಹುಲ್ ಉತ್ತಮ ಬ್ಯಾಟ್​ ಮೂಲಕ 70 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಆದರೆ, ಉಳಿದ ಬ್ಯಾಟರ್‌ಗಳಿಂದ ಯಾವುದೇ ನಿರೀಕ್ಷಿತ ರನ್​ಗಳು ಬರಲಿಲ್ಲ. ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ನಾಯಕ ರೋಹಿತ್ ಶರ್ಮಾ 27 ರನ್​ ಸಿಡಿಸಿರು. ಆದರೆ, ಮತ್ತೊಬ್ಬ ಆಟಗಾರ ಶಿಖರ್ ಧವನ್ 17 ಬಾಲ್ ಎದುರಿಸಿ ಕೇವಲ 7 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ದರು.

ಭರವಸೆಯ ಆಟಗಾರರ ವಿರಾಟ್​ ಕೊಹ್ಲಿ ಸಹ 9 ರನ್​ಗಳಿಗೆ ಪೆವಿಲಿಯನ್​ಗೆ​ ಸೇರಿದ್ದರು. ಉಳಿದಂತೆ ಶ್ರೇಯಸ್ ಅಯ್ಯರ್ (24) ಮತ್ತು ವಾಷಿಂಗ್ಟನ್ ಸುಂದರ್ (19) ಮಾತ್ರ ಒಂದಂಕಿ ರನ್​ ಬಾರಿಸಿದರು. ನಂತರ ಯಾವ ಆಟಗಾರರು ಕೂಡ ಒಂದಂಕಿ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಸಿರಾಜ್ (9), ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಸೆನ್ (ಅಜೇಯ) ತಲಾ 2 ರನ್​ ಹಾಗೂ ದೀಪಕ್ ಚಹರ್, ಶಹಬಾಜ್ ಅಹ್ಮದ್ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಸಾಧಾರಣ 186 ರನ್​ಗಳನ್ನು ಭಾರತ ಕಲೆ ಹಾಕಿತ್ತು.

ಇದನ್ನೂ ಓದಿ:ಫಿಟ್ನೆಸ್‌ಗಾಗಿ ರೋಹಿತ್​ ಶರ್ಮಾ ಹೆಚ್ಚು ಶ್ರಮಿಸಬೇಕು: ಮಣಿಂದರ್ ಸಿಂಗ್

Last Updated : Dec 4, 2022, 8:15 PM IST

ABOUT THE AUTHOR

...view details